ಮಧ್ಯಪ್ರದೇಶದ ಇಂದೋರ್‌ನಿಂದ ಶಿವಮೊಗ್ಗಕ್ಕೆ ಬರಲಿರುವ ಏಷ್ಯಾ ಸಿಂಹಗಳ ಜೋಡಿ
ಪರಿಸರದಲ್ಲಿ ಮನುಷ್ಯನಷ್ಟೇ ಬದುಕುವ ಹಕ್ಕು ಪ್ರಾಣಿ–ಪಕ್ಷಿಗಳೂ ಹೊಂದಿವೆ. ಪ್ರಾಣಿಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ನಾಗರಿಕರನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವುದೇ ದತ್ತು ಯೋಜನೆಯ ಆಶಯ
ಬಿ.ಆರ್.ಅಮರಾಕ್ಷರ್ ಕಾರ್ಯ ನಿರ್ವಾಹಕ ನಿರ್ದೇಶಕ ತ್ಯಾವರೆಕೊಪ್ಪ ಹುಲಿ–ಸಿಂಹಧಾಮ
ಹುಲಿ ದತ್ತು ಪಡೆದ ಎನ್ಇಎಸ್ ಅಡ್ವಾನ್ಸ್ಡ್ ಸ್ಟಡೀಸ್
ಶಿವಮೊಗ್ಗದ ಎನ್ಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜು ಆಡಳಿತವು ಹುಲಿ ದತ್ತು ಪಡೆದಿದೆ. ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಹುಲಿ ದತ್ತು ಯೋಜನೆಗೆ ಕೈಜೋಡಿಸಿದೆ. ಹುಲಿಯನ್ನು ಒಂದು ತಿಂಗಳ ಅವಧಿಗೆ ನವಿಲನ್ನು ಒಂದು ವರ್ಷದ ಅವಧಿಗೆ ನಿರ್ವಹಣೆ ಆಹಾರ ಮತ್ತು ಆರೈಕೆಗಾಗಿ ನಿರ್ದಿಷ್ಟ ಮೊತ್ತವನ್ನು ಕೊಡುಗೆಯಾಗಿ ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ಸಮಿತಿಯಿಂದ ಕೊಡಲಾಗಿದೆ. ಕಾಲೇಜಿನ ಸಭಾಂಗಣದಲ್ಲಿ ಗುರುವಾರ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಿತು.