ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಭಕ್ತ ಮುಸ್ಲಿಂರನ್ನು ಗೌರವಿಸುತ್ತೇನೆ: ಕೆ.ಎಸ್‍ ಈಶ್ವರಪ್ಪ

Published 29 ಏಪ್ರಿಲ್ 2024, 16:09 IST
Last Updated 29 ಏಪ್ರಿಲ್ 2024, 16:09 IST
ಅಕ್ಷರ ಗಾತ್ರ

ಆನವಟ್ಟಿ: ‘ನಾನು ಹಿಂದೂವಾದಿಯಾದರು ಕೂಡ ರಾಷ್ಟ್ರಭಕ್ತ ಮುಸ್ಲಿಮರನ್ನು ಗೌರವಿಸುತ್ತೇನೆ. ಕ್ರೈಸ್ತ, ಮುಸ್ಲಿಂ, ಹಿಂದೂ ಎಲ್ಲರೂ ಅಣ್ಣತಮ್ಮಂದಿರಂತೆ. ಆದರೆ ರಾಷ್ಟ್ರ ದ್ರೋಹಿಗಳು, ಅತ್ಯಾಚಾರಿಗಳು, ಭಯೋತ್ಪಾದಕ ಮುಸ್ಲಿಮರನ್ನು ದ್ವೇಷಿಸುತ್ತೇನೆ. ಲವ್‍ ಜಿಹಾದ್‍ ಹೆಸರಲ್ಲಿ ಹಿಂದೂ ಮಹಿಳೆಯರನ್ನು ಕೊಲೆ ಮಾಡುವ ಮುಸ್ಲಿಮರಿಗೆ ಶಿಕ್ಷೆಯಾಗುವವರೆಗೂ ಬಿಡುವುದಿಲ್ಲ’  ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್‍ ಈಶ್ವರಪ್ಪ ಗುಡುಗಿದರು.

ಭಾನುವಾರ ಇಲ್ಲಿ ರಾಷ್ಟ್ರಭಕ್ತರ ಬಳಗ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ಅವರು ಕಾಂಗ್ರೆಸ್‌ನ ಸೊನಿಯಾ ಗಾಂಧಿ, ರಾಹುಲ್‍ ಗಾಂಧಿ ಅವರ ಕುಟುಂಬ ರಾಜಕರಣ ಅಂತ್ಯಗೊಳಿಸುವ ಶಪಥ ಮಾಡಿದ್ದಾರೆ. ಆದರೆ ಪಕ್ಷ ತೊರೆದು, ಮೋದಿ–ಅಮಿತ್ ಶಾ ಅವರನ್ನು ಮನಬಂದಂತೆ ಬೈದು, ಮತ್ತೆ ಬಿಜೆಪಿ ಸೇರಿ ಪಕ್ಷವನ್ನು ಕುಟುಂಬದ ಹಿಡಿತದಲ್ಲಿ ಇಟ್ಟುಕೊಂಡಿರುವ ಯಡಿಯೂರಪ್ಪ ಅವರದ್ದೂ ಕುಟುಂಬ ರಾಜಕಾರಣವೇ. ಸ್ವಾರ್ಥ ರಾಜಕಾರಣಕ್ಕೆ ಅಪ್ಪಟ ಹಿಂದೂವಾದಿ ನಾಯಕರನ್ನು ಮೂಲೆಗುಂಪು ಮಾಡಿ ತಮಗೆ ಬೇಕಾದವರಿಗೆ ಬಿಜೆಪಿ ಟಿಕೆಟ್‍ ಕೂಡಿಸಿದ್ದಾರೆ. ರಾಘವೇಂದ್ರ ಅವರನ್ನು ಸೋಲಿಸಿ, ಕುಟುಂಬ ರಾಜಕರಣಕ್ಕೆ ಅಂತ್ಯಕಾಣಿಸುವುದೇ ನನ್ನ ಗುರಿ’ ಎಂದು ಯಡಿಯೂರಪ್ಪ ಕುಟುಂಬದ ಮೇಲೆ ಹರಿಹಾಯ್ದರು.

‘ಸಿದ್ದರಾಮಯ್ಯ ಗ್ಯಾರಂಟಿ ಹೆಸರಲ್ಲಿ ರಾಜ್ಯದ ಖಜಾನೆ ಕಾಲಿ ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್‍ ಬಂದರೆ ಐದು ಗ್ಯಾರಂಟಿ ಜನರಿಗೆ ನೀಡುತ್ತೇವೆ ಎಂದು ನೀಡಿರುವ ಕಾರ್ಡ್ ಹಸಿಸುಳ್ಳು.  ಅವುಗಳನ್ನು ಸುಟ್ಟು ಹಾಕಿ’ ಎಂದರು.

‘ಬಡವರ ಹೆಸರಲ್ಲಿ ರಾಜಕರಣ ಮಾಡುವ ಕಾಂಗ್ರೆಸ್‍, ಬಿಜೆಪಿ ಬಡವರಿಗೆ ಏನೂ ಅನುಕೂಲ ಮಾಡಿಲ್ಲ. ನಾನು ಉಪಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದ ಸಾಕಷ್ಟು ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ಮಠ, ಮಂದಿರಗಳಿಗೆ ಅನುದಾನ ಕೂಡಿಸಿದ್ದೇನೆ. ಆದರೆ ಸೊರಬ ತಾಲ್ಲೂಕಿನಲ್ಲಿ 35 ವರ್ಷದಿಂದ ಬಗರ್ ಹುಕಂ, ಅರಣ್ಯ ವಾಸಿಗಳಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಹೇಳುತ್ತಲ್ಲೇ ಜನರಿಗೆ ಮೋಸ ಮಾಡಿದ್ದಾರೆ. ಎಲ್ಲಾ ಜಾತಿ ಧರ್ಮದಲ್ಲೂ ಬಡವರಿದ್ದಾರೆ. ಅವರಿಗೆ ನ್ಯಾಯ ಒದಗಿಸುವುದೇ ನನ್ನ ಮೊದಲ ಕೆಲಸ’ ಎಂದು ಈಶ್ವರಪ್ಪ ಹೇಳಿದರು. 

‘ಬಂಗಾರಪ್ಪ ಅವರನ್ನು ಕಂಡರೇ ನನಗೆ ತುಂಬ ಗೌರವ, ಕಾರಣ ಅವರು ಬಡವರ ಪರ ಚಿಂತನೆ ಮಾಡುತ್ತಿದ್ದರು ಮತ್ತು ಬಡವರ ಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ ಅವರ ಮಕ್ಕಳಾದ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಅವರ ಕಚ್ಚಾಟದಿಂದ ಸೊರಬ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಸಂಪೂರ್ಣ ನೀರಾವರಿ ಕಲ್ಪಿಸಲು ಅವರಿಗೆ ಸಾಧ್ಯವಾಗಲಿಲ್ಲ. ಹೀಗಿರುವಾಗ, ಅವರ ಪುತ್ರಿ ಗೀತಾ ಶಿವರಾಜಕುಮಾರ್ ಏನು ಮಾಡಬಹುದು ಎಂದು ನೀವೇ ಯೋಚಿಸಿ’ ಎಂದರು.

ರಾಷ್ಟ್ರ ಭಕ್ತರ ಬಳಗದ ಆನವಟ್ಟಿ ಘಟಕದ ಅಧ್ಯಕ್ಷ ರಾಮಾನಾಯ್ಕ ಕೋಟಿಪುರ, ಸದಸ್ಯರಾದ ಕೇಶವ ನಾಯ್ಕ, ಸಂಜೀವ್ ನಾಯ್ಕ, ಪ್ರಶಾಂತ ನೆಲ್ಲಿಕೊಪ್ಪ ಮುಖಂಡರಾದ ವಿಠ್ಠಲ್‍ ಬನ್ನಿ, ಟಿ.ವಿ ಬೆಳಗಾವಿ, ಎನ್‍ವೀರಪ್ಪ, ಮೂಗಡಪ್ಪ, ಸುಜಾತ ಕಳ್ಳಿಕೇರಿ, ದುರ್ಗಪ್ಪ ಅಂಗಡಿ, ದಾನಪ್ಪ ಗಂಟೇರ್, ಪ್ರಭಾಕರ್ ರಾಯ್ಕರ್, ಚಿದಾನಂದಗೌಡ, ಮಂಜುನಾಥ ಸಾಗರ, ಹೇಮಾರವಿ, ವಕೀಲ ಶಿವಪ್ಪ ಇದ್ದರು.

ಆನವಟ್ಟಿಯಲ್ಲಿ ರಾಷ್ಟ್ರಭಕ್ತರ ಬಗಳದಿಂದ ಹಮ್ಮಿಕೊಂಡಿದ್ದ ಪಕ್ಷೇತರ ಅಭ್ಯರ್ಥಿ ಕೆ.ಎಸ್‍ ಈಶ್ವರ ಅವರ ಬಹಿರಂಗ ಸಮಾವೇಶಕ್ಕೆ ಹರಿದು ಬಂದ ಜನಸಾಗರ.
ಆನವಟ್ಟಿಯಲ್ಲಿ ರಾಷ್ಟ್ರಭಕ್ತರ ಬಗಳದಿಂದ ಹಮ್ಮಿಕೊಂಡಿದ್ದ ಪಕ್ಷೇತರ ಅಭ್ಯರ್ಥಿ ಕೆ.ಎಸ್‍ ಈಶ್ವರ ಅವರ ಬಹಿರಂಗ ಸಮಾವೇಶಕ್ಕೆ ಹರಿದು ಬಂದ ಜನಸಾಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT