ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಕೋಡಿ ಒಡೆದು 600ಕ್ಕೂ ಹೆಚ್ಚು ಎಕರೆ ಭತ್ತದ ಗದ್ದೆ ಜಲಾವೃತ

Last Updated 8 ಆಗಸ್ಟ್ 2022, 4:38 IST
ಅಕ್ಷರ ಗಾತ್ರ

ಆನವಟ್ಟಿ: ನಿರಂತರ ಮಳೆಯಿಂದಾಗಿ ಹೋಬಳಿಯ ಎಲ್ಲಾ ಕೆರೆ, ಕಟ್ಟೆಗಳು ತುಂಬಿದ್ದು, ಆನವಟ್ಟಿಯ ಹೊಸಕೆರೆಯ ಕೋಡಿ ಒಡೆದಿದೆ. ಇದರಿಂದ ಬಂದ್ನಿಕಟ್ಟೆ ಗ್ರಾಮದ 600ಕ್ಕೂ ಹೆಚ್ಚು ಎಕರೆ ಭತ್ತದ ಗದ್ದೆ ಜಲಾವೃತವಾಗಿದೆ.

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ನಾಟಿ ಸಾಧ್ಯವಾಗಿರಲಿಲ್ಲ. ಭತ್ತದ ನಾಟಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಬಂದ್ನಿಕಟ್ಟೆ ಗ್ರಾಮದ ರೈತರಿಗೆ ಹೊಸಕೆರೆ ಕೋಡಿ ಕಾಲುವೆ ಒಡೆದಿರುವುದರಿಂದ ಕಂಗಾಲಾಗಿದ್ದಾರೆ.

ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಕೊಡಲೇ ಹೊಸಕೆರೆ ಕೋಡಿ ಕಾಲುವೆ ದುರಸ್ತಿ ಮಾಡಬೇಕು ಎಂದು ಕೃಷಿಕರಾದ ಚಂದ್ರು ಮಸಾಲ್ತಿ, ಕುಂಬ್ರಿ ಮಧು, ರಾಮಣ್ಣ ಹಾಗೂ ಬಣಕಾರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT