ಶಿವಮೊಗ್ಗ: ತುಂಗಾ ಎಡನಾಲೆಯ ಸುರಂಗ ಮಾರ್ಗದ ಸ್ವಚ್ಛತೆಯ ಕಾರಣ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಂಗಾ ಎಡನಾಲೆಗೆ ಜುಲೈ 13ರಂದು ನೀರು ಹರಿಸಲಾಗಿತ್ತು. ಆದರೆ ನಾಲೆಯ ಸುರಂಗ ಮಾರ್ಗದಲ್ಲಿ ಕಸಕಡ್ಡಿ ಮತ್ತು ಮಣ್ಣು ಹರಿದು ಬಂದಿರುವುದರಿಂದ ಸುರಂಗ ಮಾರ್ಗವನ್ನು ಸ್ವಚ್ಛಗೊಳಿಸಲು 5 ದಿನಗಳ ಕಾಲಾವಕಾಶ ಬೇಕು. ಆದ್ದರಿಂದ ತುಂಗಾ ಎಡದಂಡೆ ಕಾಲುವೆಯಲ್ಲಿ ನೀರಿನ ಹೊರ ಹರಿವಿನ ಪ್ರಮಾಣ ಕಡಿಮೆಯಾಗುವ ಸಂಭವವಿದೆ. ತುಂಗಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಭಾಗದ ರೈತರು ಸಹಕರಿಸಬೇಕು ಎಂದು ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.