ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗನಮಕ್ಕಿಯಲ್ಲಿ ನೀರಿನ ಸಂಗ್ರಹ ಕುಸಿತ: 20 ದಿನಗಳ ವಿದ್ಯುತ್ ಉತ್ಪಾದನೆಗಷ್ಟೇ ನೀರು

Published 1 ಜುಲೈ 2023, 15:50 IST
Last Updated 1 ಜುಲೈ 2023, 15:50 IST
ಅಕ್ಷರ ಗಾತ್ರ

ಕಾರ್ಗಲ್: ನಾಡಿಗೆ ಬೆಳಕು ನೀಡುವ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಇಳಿಕೆಯಾಗಿದೆ. ಕೇವಲ 20 ದಿನಗಳು ಮಾತ್ರ ವಿದ್ಯುತ್ ಉತ್ಪಾದನೆಗೆ ನೀರಿನ ಸಂಗ್ರಹವಿದೆ ಎಂದು ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ನಾರಾಯಣ ಗಜಕೋಶ್ ತಿಳಿಸಿದ್ದಾರೆ.

ಸಮುದ್ರ ಮಟ್ಟದಿಂದ 1819 ಅಡಿ ಗರಿಷ್ಠ ಮಟ್ಟದವರೆಗೆ ನೀರಿನ ಸಂಗ್ರಹ ಸಾಮರ್ಥ್ಯವಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಸದ್ಯ 1740.35 ಅಡಿ ನೀರಿನ ಸಂಗ್ರಹವಿದೆ. ಗರಿಷ್ಠ ಮಟ್ಟವನ್ನು ತಲುಪಲು 79 ಅಡಿ ನೀರಿನ ಸಂಗ್ರಹದ ಅಗತ್ಯ ಇದೆ. ಕಳೆದ ಸಾಲಿನ ಇದೇ ದಿನದಂದು 1754.64 ಅಡಿ ನೀರಿನ ಸಂಗ್ರಹವಿತ್ತು.

10 ವರ್ಷಗಳಲ್ಲಿ ಅತಿ ಹೆಚ್ಚು ಕಡಿಮೆ ನೀರಿನ ಸಂಗ್ರಹ ಇದೆ ಎಂದು ಅವರು ತಿಳಿಸಿದರು.

ಸದ್ಯ ಜಲಾಶಯದ ಸ್ಲ್ಯೂಸ್ ಗೇಟ್ ಮೂಲಕ 1356 ಕ್ಯುಸೆಕ್ ನೀರು ಹೊರಹಾಯುತ್ತಿದ್ದು, ಈ ನೀರಿನಿಂದ ಶರಾವತಿ ಜಲವಿದ್ಯುದಾಗರದಲ್ಲಿ 4 ದಶಲಕ್ಷ ಯೂನಿಟ್, ಮಹಾತ್ಮ ಗಾಂಧಿ ಮತ್ತು ಗೇರುಸೊಪ್ಪ ಜಲವಿದ್ಯುದಾಗರದಲ್ಲಿ ತಲಾ 1 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತಿದೆ. ಮಳೆಯಾದರೆ ಹೆಚ್ಚಿನ ವಿದ್ಯುತ್‌ ಉತ್ಪಾದನೆ ಮಾಡಬಹುದು. ಇಲ್ಲದಿದ್ದರೆ ಕಷ್ಟ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT