ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ಪಂದ್ಯಾವಳಿ: ಹರಿಯಾಣದ ಬಂಟಿಗೆ ಬೆಳ್ಳಿಗದೆ

ಬ್ರಹ್ಮರಥೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ
Last Updated 20 ಏಪ್ರಿಲ್ 2022, 4:53 IST
ಅಕ್ಷರ ಗಾತ್ರ

ಶಿಕಾರಿಪುರ: ಹುಚ್ಚರಾಯಸ್ವಾಮಿ ಬ್ರಹ್ಮರಥೋತ್ಸವ ಪ್ರಯುಕ್ತ ಪಟ್ಟಣದ ಕೆ.ವಿ. ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಮಂಗಳವಾರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹರಿಯಾಣದ ಬಂಟಿ ಗೆಲುವು ಸಾಧಿಸಿ ಬೆಳ್ಳಿ ಗದೆ ಪಡೆದುಕೊಂಡರು.

3 ದಿನಗಳ ಈ ಪಂದ್ಯದಲ್ಲಿ ಕೊನೆಯ ದಿನವಾದ ಮಂಗಳವಾರ ಪಂದ್ಯಾವಳಿಯಾದ ಕಾರಣ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಕುಸ್ತಿ ವೀಕ್ಷಿಸಲು ಆಗಮಿಸಿದ್ದರು.

ಪೈಲ್ವಾನರ ಮಧ್ಯೆ ಪರಸ್ಪರ ಗೆಲುವಿಗಾಗಿ ಸೆಣಸಾಟ ನಡೆಯುತ್ತಿರುವ ಸಂದರ್ಭದಲ್ಲಿ ಚಪ್ಪಾಳೆ ಹಾಗೂ ಸಿಳ್ಳೆ ಹೊಡೆಯುತ್ತಾ ಪೈಲ್ವಾನರಿಗೆ ಪ್ರೋತ್ಸಾಹ ನೀಡುತ್ತಿದ್ದ ದೃಶ್ಯ ಕಂಡುಬಂದಿತು.

ಕೊಲ್ಹಾಪುರ, ಹರಿಯಾಣ, ದಾವಣಗೆರೆ, ಹಾವೇರಿಯವರೂ ಸೇರಿ ಸ್ಥಳೀಯ ಕುಸ್ತಿಪಟುಗಳು ಉತ್ತಮ ಪ್ರದರ್ಶನ ತೋರಿದರು. ವಿಜೇತ ಕುಸ್ತಿ ಪಟುಗಳಿಗೆ ಬೆಳ್ಳಿಗದೆ ಹಾಗೂ ನಗದು ಬಹುಮಾನ ನೀಡಲಾಯಿತು. ಬಂಟಿ ಹರಿಯಾಣ ಹಾಗೂ ರಾಮ್ ರಾಮ್ ಕೊಲ್ಹಾಪುರ ಮಧ್ಯೆ ಬೆಳ್ಳಿಗದೆ ಬಹುಮಾನ ಪಡೆಯಲು ಸೆಣಸಾಟ ನಡೆಯಿತು. ಸೆಣಸಾಟದಲ್ಲಿ ಬಂಟಿ ಹರಿಯಾಣ ಗೆಲುವು ಸಾಧಿಸಿ ಬೆಳ್ಳಿಗದೆ ಹಾಗೂ ₹ 15 ಸಾವಿರ ನಗದು ಬಹುಮಾನ ಪಡೆದುಕೊಂಡರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ವಿಜೇತ ಪೈಲ್ವಾನರಿಗೆ ಬಹುಮಾನ ವಿತರಿಸಿದರು.

ಕುಸ್ತಿ ಕಮಿಟಿ ಅಧ್ಯಕ್ಷ ಜೆ. ಸುಕೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ಟಿ.ಎಸ್. ಮೋಹನ್, ಹುಲ್ಮಾರ್ ಮಹೇಶ್, ಬೆಣ್ಣೆ ದೇವೇಂದ್ರಪ್ಪ, ಗುರುರಾಜ್ ರಾವ್ ಜಗತಾಪ್, ಗೋಣಿ ಪ್ರಕಾಶ್, ದರ್ಶನ್, ಮಾಜಿ ಸದಸ್ಯ ಬಡಗಿ ಫಾಲಾಕ್ಷ , ಪದಾಧಿಕಾರಿಗಳಾದ ಸಂದಿಮನಿ ರಾಜಣ್ಣ, ರಹಮತ್ ವುಲ್ಲಾ, ಸ.ನಾ. ಮಂಜಪ್ಪ, ಗುಂಡಿಗಟ್ಟಿ ಮಂಜಣ್ಣ, ಹಳೆಣ್ಣೆ ಹುಚ್ಚರಾಯ, ಭಂಡಾರಿ ಮಾಲತೇಶ್, ಕುಟ್ಟಿ ರಾಜಣ್ಣ, ನಾರಾಯಣ್, ಸಂದೀಪ್‌ ಬೆಣ್ಣೆ ಶಿವು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT