ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

SSLC Result 2024 | ಶಿವಮೊಗ್ಗ: 956 ವಿದ್ಯಾರ್ಥಿಗಳ ಶತಕದ ಸಾಧನೆ

ಎಸ್‌ಎಸ್‌ಎಲ್‌ಸಿ: ಹಲವು ವಿಷಯಗಳಲ್ಲಿ 100ಕ್ಕೆ 100 ಅಂಕ
ಮಲ್ಲಪ್ಪ ಸಂಕೀನ್‌
Published 13 ಮೇ 2024, 5:25 IST
Last Updated 13 ಮೇ 2024, 5:25 IST
ಅಕ್ಷರ ಗಾತ್ರ

ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ 956 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಕಠಿಣ ಮತ್ತು ಯೋಜನಾಬದ್ಧವಾಗಿ ಅಧ್ಯಯನ ಮಾಡಿದರೆ ಸಾಧನೆ ಮಾಡಬಹುದು ಎಂಬುದನ್ನು ಜಿಲ್ಲೆಯ ಮಕ್ಕಳು ತೋರಿಸಿದ್ದಾರೆ. 

ಭದ್ರಾವತಿ ತಾಲ್ಲೂಕಿನಲ್ಲಿ ಕನ್ನಡದಲ್ಲಿ 55 ವಿದ್ಯಾರ್ಥಿಗಳು, ಇಂಗ್ಲಿಷ್‌ನಲ್ಲಿ 16, ಹಿಂದಿಯಲ್ಲಿ 34, ಗಣಿತದಲ್ಲಿ 5, ಸಮಾಜ ವಿಜ್ಞಾನದಲ್ಲಿ 5 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. ಆದರೆ ವಿಜ್ಞಾನ ವಿಷಯದಲ್ಲಿ ಯಾವ ವಿದ್ಯಾರ್ಥಿಗಳೂ 100ಕ್ಕೆ 100 ಅಂಕ ಪಡೆದಿಲ್ಲ. 

ಹೊಸನಗರ ತಾಲ್ಲೂಕಿನಲ್ಲಿ ಕನ್ನಡದಲ್ಲಿ 50 ವಿದ್ಯಾರ್ಥಿಗಳು, ಇಂಗ್ಲಿಷ್‌ನಲ್ಲಿ 8, ಹಿಂದಿಯಲ್ಲಿ 23, ಗಣಿತದಲ್ಲಿ ಒಬ್ಬರು, ವಿಜ್ಞಾನದಲ್ಲಿ 1 ಹಾಗೂ ಸಮಾಜ ವಿಜ್ಞಾನದಲ್ಲಿ 3 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದುಕೊಂಡಿದ್ದಾರೆ.

ಸಾಗರದಲ್ಲಿ ಕನ್ನಡದಲ್ಲಿ 68 ವಿದ್ಯಾರ್ಥಿಗಳು, ಇಂಗ್ಲಿಷ್‌ನಲ್ಲಿ 29, ಹಿಂದಿಯಲ್ಲಿ 47, ಗಣಿತದಲ್ಲಿ 3, ಸಮಾಜ ವಿಜ್ಞಾನದಲ್ಲಿ 8 ವಿದ್ಯಾರ್ಥಿಗಳು 100ರ ಸಾಧನೆ ಮಾಡಿದ್ದಾರೆ. 

ಶಿಕಾರಿಪುರ ತಾಲ್ಲೂಕಿನಲ್ಲಿ ಕನ್ನಡದಲ್ಲಿ 85, ಇಂಗ್ಲಿಷ್‌ನಲ್ಲಿ 17, ಹಿಂದಿಯಲ್ಲಿ 40, ಗಣಿತದಲ್ಲಿ 4 ಮತ್ತು ಸಮಾಜ ವಿಜ್ಞಾನದಲ್ಲಿ 14 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದುಕೊಂಡು ಪಾರಮ್ಯ ಮೆರೆದಿದ್ದಾರೆ. ಆದರೆ ವಿಜ್ಞಾನದಲ್ಲಿ 100 ಸಾಧನೆಯಾಗಿಲ್ಲ.

ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಕನ್ನಡದಲ್ಲಿ 85 ವಿದ್ಯಾರ್ಥಿಗಳು, ಇಂಗ್ಲಿಷ್‌ನಲ್ಲಿ 27, ಹಿಂದಿಯಲ್ಲಿ 77, ಗಣಿತದಲ್ಲಿ 24, ವಿಜ್ಞಾನದಲ್ಲಿ 9 ಮತ್ತು ಸಮಾಜ ವಿಜ್ಞಾನದಲ್ಲಿ 18 ವಿದ್ಯಾರ್ಥಿಗಳು 100ರ ಸಾಧನೆ ಮಾಡಿದ್ದಾರೆ.

ಸೊರಬದಲ್ಲಿ ಕನ್ನಡದಲ್ಲಿ 47, ಇಂಗ್ಲಿಷ್‌ನಲ್ಲಿ 15, ಹಿಂದಿಯಲ್ಲಿ 28, ಗಣಿತದಲ್ಲಿ ಒಬ್ಬರು, ವಿಜ್ಞಾನದಲ್ಲಿ ಇಬ್ಬರು ಮತ್ತು ಸಮಾಜ ವಿಜ್ಞಾನದಲ್ಲಿ 10 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. 

ತೀರ್ಥಹಳ್ಳಿಯಲ್ಲಿ ಕನ್ನಡದಲ್ಲಿ 39, ಇಂಗ್ಲಿಷ್‌ನಲ್ಲಿ 16, ಹಿಂದಿಯಲ್ಲಿ 5, ವಿಜ್ಞಾನದಲ್ಲಿ 4 ಮತ್ತು ಸಮಾಜ ವಿಜ್ಞಾನದಲ್ಲಿ 20 ವಿದ್ಯಾರ್ಥಿಗಳು 100ರ ಪಾರಮ್ಯ ಮೆರೆದಿದ್ದಾರೆ.

ಹಿಂದಿನ ವರ್ಷಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿರುವುದು, ವಾರ್ಷಿಕ ಪರೀಕ್ಷೆಗೆ ಹಾಜರಾಗುವ ಮೊದಲು ಕನಿಷ್ಠ ಐದಾರು ಬಾರಿ ಪ್ರತಿ ವಿಷಯವನ್ನು ಅಧ್ಯಯನ ಮಾಡಿರುವುದು, ಓದುವುದಕ್ಕೆ ಸರಿಯಾದ ಸಮಯ ನಿಗದಿ ಮಾಡಿಕೊಂಡಿರುವುದು, ಅಂದಿನ ಪಾಠವನ್ನು ಅಂದೇ ಅಧ್ಯಯನ ಮಾಡಿರುವುದು... ಹೀಗೆ ಹಲವು ಕ್ರಮ ಅನುಸರಿಸಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಈ ಬಾರಿ 100ಕ್ಕೆ 100 ಅಂಕ ಪಡೆದು ಸಾಧನೆ ಮಾಡಿ‌‌ದ್ದಾರೆ ಎಂದು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT