ಶುಕ್ರವಾರ, ಮೇ 27, 2022
21 °C

ತೀರ್ಥಹಳ್ಳಿ: ಕಾರ್ಮಿಕನ ಸಾವಿನ ವಿಷಯ ತಿಳಿದ ಮಾಲೀಕನಿಗೂ ಹೃದಯಾಘಾತ, ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟರು. ಈ ವಿಚಾರ ತಿಳಿಯುತ್ತಿದ್ದಂತೆ ಮಾಲೀಕನಿಗೂ ಹೃದಯಾಘಾತ ಉಂಟಾಗಿ ಅವರು ಕೂಡ ಅಸುನೀಗಿದರು. ಈ ಮನಕಲಕುವ ಪ್ರಕರಣ ತಾಲ್ಲೂಕಿನ ಆರಗ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಕಾರ್ಮಿಕ ಬರ್ಮಪ್ಪ (45) ಮತ್ತು ಮಾಲೀಕ ದುಗ್ಗಪ್ಪ ಗೌಡ (75) ಮೃತಪಟ್ಟವರು. ನಿವೃತ್ತ ಶಿಕ್ಷಕರಾಗಿರುವ ದುಗ್ಗಪ್ಪ ಗೌಡರ ತೋಟದ ಕೆಲಸಕ್ಕೆ ಬರ್ಮಪ್ಪ ಬಂದಿದ್ದರು. ಮಧ್ಯಾಹ್ನದವರೆಗೆ ಚೆನ್ನಾಗಿಯೇ ಕೆಲಸ ಮಾಡಿದ್ದರು. ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಕುಸಿದು ಬಿದ್ದರು. ತಕ್ಷಣ ದುಗ್ಗಪ್ಪ ಗೌಡರ ಮನೆಯ ಸದಸ್ಯರು ಸ್ಥಳಕ್ಕೆ ಬಂದರು. ಅಷ್ಟು ಹೊತ್ತಿಗೆ ಬರ್ಮಪ್ಪ ಮೃತಪಟ್ಟಿದ್ದರು. ಈ ವಿಚಾರವನ್ನು ಬರ್ಮಪ್ಪನ ಮನೆಯವರಿಗೆ ತಿಳಿಸಲು ಹೊರಟಿದ್ದ ದುಗ್ಗಪ್ಪ ಗೌಡ ಅವರೂ ದಾರಿ ಮಧ್ಯೆಯೇ ಕುಸಿದು ಮೃತಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು