ಸಿಗಂದೂರು (ತುಮರಿ): ಬಹುಕಾಲದ ಬೇಡಿಕೆ, ಶರಾವತಿ ಮುಳುಗಡೆ ಪ್ರದೇಶದ ಜನರ ಹಲವು ದಶಕಗಳ ಕನಸು ಈಡೇರುವ ದಿನ ಹತ್ತಿರವಾಗುತ್ತಿದ್ದು ಜೂನ್ 15ರೊಳಗೆ ಸಿಗಂದೂರು ಸೇತುವೆ ಲೋಕಾರ್ಪಣೆಯಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಶರಾವತಿ ಹಿನ್ನೀರಿನ ಹೊಳೆಬಾಗಿಲಿನಲ್ಲಿ ನಿರ್ಮಾಣ ಹಂತದಲ್ಲಿರುವ ಸಿಗಂದೂರು ಸೇತುವೆ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿ ಅವರು ಮಾತನಾಡಿದರು.

ಲೋಕಾರ್ಪಣೆ ಸಂಬಂಧ ಕೇಂದ್ರದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಸೇತುವೆ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ಚರ್ಚೆ ನಡೆಸಲಾಗಿದೆ ಎಂದರು.

ಸಾಗರ–ಮರಕುಟಕ ರಸ್ತೆಯನ್ನು 369–ಇ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಸೇತುವೆ ಲೋಕಾರ್ಪಣೆ ಬಳಿಕ ಹೆದ್ದಾರಿ ಕಾಮಗಾರಿ ಆರಂಭವಾಗಲಿದೆ. ಈ ಭಾಗದ ಜನರ ಅನುಕೂಲಕ್ಕಾಗಿ ಬಹುಕೋಟಿ ವೆಚ್ಚದ ಸೇತುವೆಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಕಷ್ಟು ಶ್ರಮಿಸಿದ್ದಾರೆ ಎಂದು ಅವರು ನೆನಪಿಸಿಕೊಂಡರು.

ಹೊರ ಜಗತ್ತಿನ ಸಂಪರ್ಕಕ್ಕೆ ಸಾಕಷ್ಟು ಅನನುಕೂಲ ಹೊಂದಿರುವ ದ್ವೀಪ ಭಾಗದ ಹಳ್ಳಿಗಳ ಸಂಪರ್ಕಕ್ಕೆ ಸೇತುವೆಯ ಅಗತ್ಯ ಮನಗಂಡು ₹423 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದಕ್ಕೆ ನಾಲ್ಕುವರೆ ವರ್ಷ ಸಮಯ ಹಿಡಿದಿದೆ. ಮಲೆನಾಡಿನ ಪ್ರಮುಖ ಯಾತ್ರಾ ಸ್ಥಳಗಳಾದ ಸಿಗಂದೂರು, ಕೊಲ್ಲೂರು, ಕೊಡಚಾದ್ರಿ ಭಾಗಗಳಿಗೆ ಇದು ಸಂಪರ್ಕ ಸೇತುವೆಯಾಗಲಿದ್ದು, ಈ ಭಾಗದ ಜನರು, ಪ್ರವಾಸಿಗರಿಗರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ವಿವರಿಸಿದರು.

ಉಸ್ತುವಾರಿ ಎಂಜಿನಿಯರ್ ಪೀರ್ ಪಾಷ, ಮುಖಂಡರಾದ ಟಿ.ಡಿ. ಮೇಘರಾಜ್, ಮೈತ್ರಿ ಪಾಟೀಲ್, ಹಕ್ರೆ ಮಲ್ಲಿಕಾರ್ಜುನ್, ಹೊನಗೋಡು ರತ್ನಾಕರ, ಭರಮಣ್ಣ, ದೇವೇಂದ್ರ, ಸುವರ್ಣ ಟೀಕಪ್ಪ, ಪ್ರಸನ್ನ ಕೆರೆಕೈ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.