‘ಮನೆ ಮನೆ ಗಂಗೆ’ ಯೋಜನೆಯನ್ನು ತಲುಪಿಸುವ ಭರದಲ್ಲಿ ಶಾಲೆಗಿದ್ದ ಬೋರ್‌ವೆಲ್ ಸಂಪರ್ಕ ಕಟ್ ಮಾಡಲಾಗಿದೆ. ಶಾಲೆ ತೊಟ್ಟಿ ಸಿಂಟೆಕ್ಸ್‌ಗೆ ಪೈಪ್‌ಲೈನ್ ಅಳವಡಿಸಬೇಕು. ಶಾಲೆಯ ಸುತ್ತಲೂ ಕಂಪೌಂಡ್ ನಿರ್ಮಿಸಿ ಸಸಿ ನೆಡಬೇಕು. ಈ ಬಗ್ಗೆ ಪಿಡಿಒ ನಿರ್ಲಕ್ಷ್ಯ ಮಾಡಿದರೆ ಗಂಭೀರವಾಗಿ ಪರಿಗಣಿಸಬೇಕು.
ನಾಗರಾಜ ನಾಯ್ಕ, ಶಾಲಾಭಿವೃದ್ಧಿ ಸಮಿತಿ ಸದಸ್ಯ
ಶಾಲೆ ಸಮಸ್ಯೆ ಕುರಿತು ಗ್ರಾಮಸ್ಥರು ಶಾಲೆ ಮುಖ್ಯಶಿಕ್ಷಕರು ಗಮನಕ್ಕೆ ತಂದಿದ್ದು ಸ್ಥಳ ಪರಿಶೀಲನೆ ಮಾಡಲು ಪಿಡಿಒಗೆ ಸೂಚಿಸಿದ್ದೇನೆ. ನೀರಿನ ಸಮಸ್ಯೆ ಕೂಡಲೇ ಪರಿಹರಿಸಲಾಗುವುದು.