ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ದುರುಪಯೋಗ: ಸಾರ್ವಜನಿಕರ ಆಕ್ರೋಶ

Last Updated 10 ಡಿಸೆಂಬರ್ 2013, 7:01 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ದೋಗ ಖಾತ್ರಿ ಯೋಜನೆಯಲ್ಲಿ ಗಂಭೀರ ಲೋಪ ಎಸಗಲಾಗಿದೆ. ಗಿಡ ನೆಡದೇ, ಕೆಲಸ ಮಾಡದೇ ಹಣ ಪಾವತಿಸಲಾಗಿದೆ ಎಂದು ಕೋಣಂದೂರು ಗ್ರಾಮ ಪಂಚಾಯ್ತಿ   ಯಲ್ಲಿ ಸೋಮವಾರ  ನಡೆದ ಜಮಾಬಂದಿಯಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು.

2012–13ನೆ ಸಾಲಿನಲ್ಲಿ ಗ್ರಾಮ ಪಂಚಾಯ್ತಿ ವ್ಯಚ್ಚ ಮಾಡಿದ ಅನುದಾನದ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕ ಆಸ್ಪತ್ರೆ ಆವರಣ ಹಾಗೂ ಕೋಣಂದೂರಿನಿಂದ ಯೋಗಿಮಳಲಿ ರ ಅಕ್ಕ ಪಕ್ಕ ಅರಣ್ಯೀಕರಣ ಹೆಸರಿನಲ್ಲಿ ಕ್ರಿಯಾ ಯೋಜನೆ ರೂಪಿಸಿ ಸುಮಾರು ₨2 ಲಕ್ಷ ವೆಚ್ಚ ಮಾಡಲಾಗಿದೆ. ಅರಣ್ಯೀಕರಣ ಕಾರ್ಯಕ್ರಮದಲ್ಲಿ ನೆಟ್ಟ ಗಿಡಗಳು ಎಲ್ಲಿಯೂ ಕಂಡು ಬರುವುದಿಲ್ಲ. ನೆಟ್ಟ ಗಿಡಗಳು ಎಲ್ಲಿಹೋದವು ಎಂದು ಸಾರ್ವಜನಿಕರು ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ, ಕ್ರಿಯಾ ಯೋಜನೆಯಂತೆ ಆಸ್ಪತ್ರೆ ಆವರಣದಲ್ಲಿ ಗಿಡಗಳನ್ನು ನೆಡಲಾಗಿದೆ. ಕೋಣಂದೂರು ಯೋಗಿಮಳಲಿ ರಸ್ತೆ ಅಕ್ಕ ಪಕ್ಕ ಗಿಡ ನೆಡಲು ಸಾಧ್ಯವಾಗಿಲ್ಲ. ಇದರ ಬದಲಾಗಿ ಬೇರೆ ಪ್ರದೇಶವನ್ನು ಗಿಡ ನೆಡಲು ಆಯ್ಕೆ ಮಾಡಿ ನೆಡಲಾಗಿದೆ ಎಂದರು.

  ಪಿಡಿಒ  ಸ್ಪಷ್ಟ ಉತ್ತರ ನೀಡಲು ವಿಫಲರಾಗಿದ್ದಾರೆ. ಗಿಡ ನೆಡುವ ಸಂಬಂಧ ಬಳಸಿದ ಹಣ ದುರುಪಯೋಗವಾಗಿದೆ. ಗಿಡ ನಡದೇ ಇದ್ದವರ ಹೆಸರಿಗೂ ಸಂಬಳ ನೀಡಿದ್ದೀರಿ. ಗಾ್ರಮ ಪಂಚಾಯ್ತಿ ಆಡಳಿತ ಅವ್ಯವಹಾರ ನಡೆಸಿದೆ. ತನಿಖೆ ಆಗಬೇಕು ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಪುಟ್ಟಸ್ವಾಮಿ ನಿರ್ಣಯ ತೆಗೆದುಕೊಳ್ಳುವಂತೆ ಸಭೆಗೆ ಸೂಚಿಸಿದರು.

ಜಮಾಬಂಧಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಾಣಿ ವಹಿಸಿದ್ದರು. ಗಾ್ರಮ ಪಂಚಾಯ್ತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಸಿಬ್ಬಂದಿಗೆ ಗೂಸಾ
ತೀರ್ಥಹಳ್ಳಿ: ‘ಆಧಾರ್‌’ ಕಾರ್ಡ್‌ ನೊಂದಣೆಯಲ್ಲಿ ನಿರತರಾದ ಸಿಬ್ಬಂದಿಗೆ ಹೆದ್ದೂರು ಗಾ್ರಮ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಗೂಸಾ ನೀಡಿದ ಪ್ರಕರಣ ವರದಿಯಾಗಿದೆ.

ಸರತಿ ಸಾಲಿನಲ್ಲಿ ನಿಂತವರಿಗೆ ಅರ್ಜಿ ನೀಡದೇ ಪ್ರಭಾವಿಗಳ ಮನೆಗಳಿಗೆ ಅರ್ಜಿ ಕಳುಹಿಸಿ ಕೊಡಲಾಗುತ್ತಿತ್ತು. ದೂರವಾಣಿ ಕರೆ  ಮಾಡಿ ಅರ್ಜಿ ನೀಡುವಂತೆ ಹೇಳಿದವರಿಗೂ ಅರ್ಜಿ ನೀಡಲಾಗುತ್ತಿತ್ತು. ಎಷ್ಟು ಹೊತ್ತು ಸರತಿ ಸಾಲಿನಲ್ಲಿ ನಿಂತರೂ ಅರ್ಜಿ ನೀಡದಾದ ಸಿಬ್ಬಂದಿ  ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು ತಾಳ್ಮೆ ಕಳೆದುಕೊಂಡು ಗಲಾಟೆಗೆ ಮುಂದಾದರು.

ತಮ್ಮ  ನೋಂದಣಿಯ ಸಮಯ ಬರದೇ ಇರುವುದರಿಂದ ಬೇಸತ್ತು ಹೋದರು. ಬೆಳಿಗ್ಗಿನಿಂದ ಸಂಜೆವರೆಗೆ ಸರತಿ ಸಾಲಿನಲ್ಲಿ ನಿಂತ ಸಾರ್ವಜನಿಕರಿಗೆ ಸಂಜೆ ವೇಳೆ ನಿಮಗೆ ಅರ್ಜಿ ನೀಡಲು ನಮ್ಮ ಬಳಿ ಅರ್ಜಿಗಳಿಲ್ಲ ಎಂದು ಹೇಳಿರುವುದು ಸಾರ್ವಜನಿಕರನ್ನು ಕೆರಳಿಸುವಂತೆ ಮಾಡಿತು.

ಅರ್ಜಿಗಳನ್ನು ಕೇವಲ ಒಂದು ಪಕ್ಷದಲ್ಲಿ ಗುರುತಿಸಿಕೊಂಡವರಿಗೆ ಮಾತ್ರ ನೀಡಲಾಗುತ್ತಿತ್ತು. ಜನರು ಆದಾರ್‌ ನೊಂದಣಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಸಿಬ್ಬಂದಿಗಳ ಮೇಲೆ ಗೂಸಾ ನೀಡಲು ಮುಂದಾದರು. ಇದನ್ನು ತಿಳಿದ ಗ್ರಾಮ ಪಂಚಾಯ್ತಿ ಸದಸ್ಯರು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರಿಂದ ಸಿಬ್ಬಂದಿ ಮೇಲೆ  ಹಲ್ಲೆ ಖಂಡನೀಯ. ಕ್ಷಮೆ ಕೇಳುವಂತೆ ಒತ್ತಾಯಿಸಿದರು.

ಸಾರ್ವಜನಿಕರು ಇದುವರೆವಿಗೂ ನಾವು ಸರತಿ ಸಾಲಿನಲ್ಲಿ ನಿಂತು ಅರ್ಜಿ ಪಡೆಯಲು ಬಂದರೆ ನಮಗೆ ಅರ್ಜಿ ನೀಡದೇ, ನಮ್ಮನ್ನು ಪರಿಗಣಿಸದೇ ಸರತಿ ಸಾಲಿನಲ್ಲಿ ನಿಲ್ಲದವರಿಗೆ ಅರ್ಜಿ ನೀಡಿ ಆಧಾರ್‌ ಕಾರ್ಡ ನೀಡಿದ್ದೂ ಅಲ್ಲದೇ ಅವರಲ್ಲಿಯೇ ಮತ್ತೆ ಕ್ಷಮೆ ಕೇಳುವಂತೆ ಹೇಳಿದ ಗ್ರಾಮ ಪಂಚಾಯ್ತಿ ಸದಸ್ಯರ ಮೇಲೆಯೂ ಹರಿಹಾಯ್ದ ಪ್ರಸಂಗ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT