ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ| 242 ಮತಗಟ್ಟೆ ಸ್ಥಾಪನೆ: ಹಾಲಸಿದ್ದಪ್ಪ ಪೂಜಾರಿ

Last Updated 2 ಏಪ್ರಿಲ್ 2023, 6:16 IST
ಅಕ್ಷರ ಗಾತ್ರ

ಕೊರಟಗೆರೆ: ‘ಕೊರಟಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮತದಾನ ನಡೆಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ’ ಎಂದು ಚುನಾವಣಾಧಿಕಾರಿ ಹಾಲಸಿದ್ದಪ್ಪ ಪೂಜಾರಿ ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಒಟ್ಟು 1,99,960 ಮತದಾರರಿದ್ದಾರೆ. ಈ ಪೈಕಿ 99,997 ಪುರುಷರು, 99,949 ಮಹಿಳೆಯರು, 14 ಇತರೆ ಮತದಾರರಿದ್ದಾರೆ. 2,332 ಅಂಗವಿಕಲ, 80 ವರ್ಷ ಮೇಲ್ಪಟ್ಟ 6,047 ಮತದಾರರಿದ್ದಾರೆ. ಅಂಗವಿಕಲ ಹಾಗೂ 80 ವರ್ಷ ಮೀರಿದವರು ಅಪೇಕ್ಷೆ ಪಟ್ಟಲ್ಲಿ ಚುನಾವಣಾ ನಿಯಮದಂತೆ ಅಧಿಕಾರಿಗಳ ತಂಡ ಅವರ ಮನೆಗೆ ತೆರಳಿ ಮತದಾನ ಮಾಡಿಸಲಿದೆ ಎಂದು ವಿವರಿಸಿದರು.

ಕ್ಷೇತ್ರದಲ್ಲಿ ಒಟ್ಟು 242 ಮತಗಟ್ಟೆ ಸ್ಥಾಪಿಸಲಾಗಿದೆ. ಅದರಲ್ಲಿ 24 ಕ್ರಿಟಿಕಲ್, 35 ಅತಿಸೂಕ್ಷ್ಮ, 73 ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಕ್ಷೇತ್ರದಲ್ಲಿ 5 ಚೆಕ್‌ಪೋಸ್ಟ್ ತೆರೆಯಲಾಗಿದೆ. ಪೋಲೇನಹಳ್ಳಿ, ಬೈರೇನಹಳ್ಳಿ, ಹನುಮಂತಗಿರಿ, ಕಾಟೇನಹಳ್ಳಿ ಕ್ರಾಸ್, ಜೋನಿಗಾರಹಳ್ಳಿ ಕ್ರಾಸ್ ಬಳಿ ಪಹರೆ ಹಾಕಲಾಗಿದೆ ಎಂದರು.

ಸಹಾಯಕ ಚುನಾವಣಾಧಿಕಾರಿಯಾದ ತಹಶೀಲ್ದಾರ್ ಮುನಿಸ್ವಾಮಿ ರೆಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ತಡೆಯಲು 15 ಎಸ್.ಎಸ್.ಟಿ, 18 ಎಪ್.ಎಸ್.ಟಿ ತಂಡ ರಚಿಸಲಾಗಿದೆ. ಅಕ್ರಮ ಕಂಡುಬಂದರೆ ಸಾರ್ವಜನಿಕರು ಕೂಡಲೇ ನಮ್ಮ ಮೊಬೈಲ್‌ ಅಥವಾ ಚುನಾವಣಾ ಸಹಾಯವಾಣಿ 08138-232153ಕ್ಕೆ ಕರೆ ಮಾಡಬಹುದು. ಏಪ್ರಿಲ್ 8ರ ವರೆಗೆ ಮತದಾರರ ಪಟ್ಟಿಗೆ ಸೇರ್ಪಡೆಗೆ ಅವಕಾಶವಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT