ಶನಿವಾರ, ಜನವರಿ 25, 2020
16 °C

ಅಪಘಾತ: ತಂದೆ, ಮಗ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಶಿರಾ: ತಾಲ್ಲೂಕಿನ ಕಂಬದಹಳ್ಳಿ ಗೇಟ್ ಬಳಿ ಶನಿವಾರ ಬಸ್‌ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ತಂದೆ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶಿರಾದ ಶಿವಾಜಿನಗರ ನಿವಾಸಿಗಳಾದ ತಿಮ್ಮಣ್ಣ (48) ಹಾಗೂ ಮಗ ಬಸವರಾಜು (26) ಬುಕ್ಕಾಪಟ್ಟಣ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕಂಬದಹಳ್ಳಿ ಗೇಟ್ ಬಳಿ ಎದುರಿಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಾಗ ದ್ವಿಚಕ್ರ ವಾಹನದಲ್ಲಿದ್ದ ತಿಮ್ಮಣ್ಣ ಮತ್ತು ಆತನ ಮಗ ಬಸವರಾಜು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು