ಅಂಗನವಾಡಿ ಕೇಂದ್ರದ ಕಟ್ಟಡ 40 ವರ್ಷಗಳಷ್ಟು ಹಳೆಯದಾಗಿದ್ದು, ಗೋಡೆ, ಛಾವಣಿ ಬಿರುಕು ಬಿಟ್ಟಿದೆ. ಮಳೆ ಬಂದರೆ ಸೋರುತ್ತಿದ್ದು, ಕಟ್ಟಡ ಬೀಳುವ ಹಂತ ತಲುಪಿದೆ. ಮಳೆ ಸುರಿದಾಗ ಮಕ್ಕಳು ಮನೆಗೆ ಹೋಗುತ್ತಾರೆ. ಕೂಲಿ ಕಾರ್ಮಿಕರು, ಬಡವರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕೇಂದ್ರದಲ್ಲಿ ಕಲಿಯುತ್ತಿದ್ದಾರೆ. ಕಟ್ಟಡ ಸುಣ್ಣ–ಬಣ್ಣ ಕಾಣದೆ ಹಲವು ವರ್ಷಗಳೇ ಕಳೆದಿವೆ. ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯ ಸಿಗುತ್ತಿಲ್ಲ. ಮಕ್ಕಳ ಆಟೋಟಕ್ಕೆ ಬೇಕಾದ ಮೈದಾನವೂ ಇಲ್ಲ.