ಮಂಗಳವಾರ, ಮೇ 17, 2022
25 °C
ಅಡುಗೆ ಎಣ್ಣೆ ಧಾರಣೆ ಏರಿಕೆ

ಬೀನ್ಸ್, ಟೊಮೆಟೊ ದುಬಾರಿ: ಗಸಗಸೆ ಬೆಲೆ ಗಗನಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಮಾರುಕಟ್ಟೆಯಲ್ಲಿ ಕಳೆದ ಕೆಲ ದಿನಗಳಿಂದ ಸ್ಥಿರವಾಗಿದ್ದ ತರಕಾರಿ ಬೆಲೆ ಈಗ ಏರಿಕೆಯತ್ತ ಮುಖ ಮಾಡಿದೆ. ಈ ವಾರವೂ ಬೀನ್ಸ್ ಮತ್ತೆ ಗಗನಮುಖಿಯಾಗಿದ್ದು, ಕೆ.ಜಿ ₹55– 60ಕ್ಕೆ ಏರಿಕೆ ಕಂಡಿದೆ. ಒಂದು ವಾರದಲ್ಲಿ ಕೆ.ಜಿ.ಗೆ ₹10 ದುಬಾರಿಯಾಗಿದೆ.

ಇಳಿಕೆಯತ್ತ ಸಾಗಿದ್ದ ಟೊಮೊಟೊ ಬೆಲೆ ಈಗ ಏರಿಕೆಯತ್ತ ಹೆಜ್ಜೆ ಹಾಕಿದೆ. ಕೆ.ಜಿ ₹10–15 ಇದ್ದದ್ದು, ಒಮ್ಮೆಲೆ ಕೆ.ಜಿ ₹25–30ಕ್ಕೆ ಏರಿಕೆ ಕಂಡಿದೆ. ಬೆಂಡೆಕಾಯಿ, ಬದನೆಕಾಯಿ, ಹಾಗಲಕಾಯಿ, ಹಸಿಮೆಣಸಿನ ಕಾಯಿ ಬೆಲೆಯೂ ಕೆ.ಜಿ.ಗೆ ₹5 ಏರಿಕೆ ಕಂಡಿವೆ.

ಅಡುಗೆ ಎಣ್ಣೆ ಧಾರಣೆ ಏರಿಕೆ ಮುಂದುವರಿಸಿದ್ದು, ಸನ್‌ಫ್ಲವರ್ ಕೆ.ಜಿ ₹138, ಪಾಮಾಯಿಲ್ ಕೆ.ಜಿ ₹112ಕ್ಕೆ ಹೆಚ್ಚಳವಾಗಿದೆ. ಗಸಗಸೆ ಬೆಲೆಯೂ ಗಗನ ಮುಟ್ಟಿದೆ. ಗುಣಮಟ್ಟದ ಗಸಗಸೆ ಬೆಲೆ ಕೆ.ಜಿ ₹1,400ಕ್ಕೆ ತಲುಪಿದೆ. ಕಡಿಮೆ ಗುಣಮಟ್ಟದ್ದು, ₹1,000ಕ್ಕೆ ಮಾರಾಟವಾಗುತ್ತದೆ. ತೊಗರಿ ಬೇಳೆ, ಉದ್ದಿನ ಬೇಳೆ, ಸಕ್ಕರೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ.

ಕೋಳಿ ಸ್ಥಿರ: ಕೋಳಿ ಬೆಲೆ ಬಹುತೇಕ ಸ್ಥಿರವಾಗಿದ್ದು, ಬ್ರಾಯ್ಲರ್ ಕೆ.ಜಿ ₹110ಕ್ಕೆ ಮಾರಾಟ ಮಾಡಲಾಗುತ್ತಿದೆ. ರೆಡಿ ಚಿಕನ್ ₹180ಕ್ಕೆ, ಮೊಟ್ಟೆಕೋಳಿ ಕೆ.ಜಿ ₹110ಕ್ಕೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ.

ತಗ್ಗಿದ ಮೀನಿನ ಬೆಲೆ: ಮೀನಿನ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಬಂಡುಗೆ, ಅಂಜಲ್ ಬೆಲೆ ಕಡಿಮೆಯಾಗಿದೆ. ಬೊಳಿಂಜರ್ ಮಾರುಕಟ್ಟೆಗೆ ಬಂದಿಲ್ಲ. ಬಂಗುಡೆ ಕೆ.ಜಿ.ಗೆ ₹10 ಕಡಿಮೆಯಾಗಿದ್ದು, ₹230ಕ್ಕೆ ಇಳಿಕೆಯಾಗಿದೆ. ಅಂಜಲ್ ಕೆ.ಜಿ.ಗೆ 60 ಇಳಿಕೆಯಾಗಿದ್ದು, ₹680ಕ್ಕೆ ಕುಸಿದಿದೆ. ಬಿಳಿ ಮಾಂಜಿ ₹860, ಕಪ್ಪು ಮಾಂಜಿ ₹580, ಸೀಗಡಿ ಕೆ.ಜಿ ₹480ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು