ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕನಾಯಕನಹಳ್ಳಿ: ಚಂದ್ರಗುತ್ತಿ ಯಲ್ಲಮ್ಮ ನೂತನ ದೇಗುಲ ಪ್ರವೇಶ

Published 5 ಡಿಸೆಂಬರ್ 2023, 13:53 IST
Last Updated 5 ಡಿಸೆಂಬರ್ 2023, 13:53 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಪಟ್ಟಣದ ರೇವಣಸಿದ್ದೇಶ್ವರ ಮಠದ ಬಳಿ ಚಂದ್ರಗುತ್ತಿ ಯಲ್ಲಮ್ಮದೇವಿ ದೇಗುಲ ಪ್ರಾರಂಭೋತ್ಸವ ಪ್ರಯುಕ್ತ ಹೋಮ ಹಾಗೂ ಪೂಜಾ ವಿಧಿ, ವಿಧಾನ ನೆರವೇರಿದವು.

ಭಾನುವಾರ ಧ್ವಜಾರೋಹಣದೊಂದಿಗೆ ಪೂಜಾ ಕಾರ್ಯಕ್ರಮ ಆರಂಭವಾದವು. ನಂತರ ಸಾಮೂಹಿಕ ನಾಗರಪೂಜೆ, ವೀರಲಕ್ಕಮ್ಮದೇವಿ, ರೇವಣಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಮುದ್ದುಲಿಂಗೇಶ್ವರ, ಶಿರುವಾಳ ಬೀರಲಿಂಗೇಶ್ವರ ಪುರಪ್ರವೇಶವಾಯಿತು.

ಚಂದ್ರಗುತ್ತಿ ಯಲ್ಲಮ್ಮದೇವಿ, ಆದ್ವಾನಿ ಯಲ್ಲಮ್ಮದೇವಿ ಹಾಗೂ ಚೌಡಿಕೆ ಯಲ್ಲಮ್ಮದೇವಿ ಮೆರವಣಿಗೆ ಅದ್ದೂರಿಯಾಗಿ ನಡೆಸಲಾಯಿತು. ಸೋಮವಾರ ಚಂದ್ರಗುತ್ತಿ ಯಲ್ಲಮ್ಮದೇವಿ ಸನ್ನಿಧಿಯಲ್ಲಿ ಹೋಮ, ವಿಶೇಷ ಪೂಜೆ ಬಳಿಕ ಎಲ್ಲ ದೇವರುಗಳ ಗಂಗಾಪೂಜೆ ನೆರವೇರಿಸಲಾಯಿತು.

ಶರಣಪ್ಪ ಒಡೆಯರ್ ನೇತೃತ್ವದಲ್ಲಿ ಚಂದ್ರಗುತ್ತಿ ಎಲ್ಲಮ್ಮ ದೇವಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸಿ.ಎಂ.ಶಂಭು, ಸಿ.ಟಿ ಮುದ್ದುಕುಮಾರ್, ಡಾ.ಸಿ.ಎಸ್. ಸುಶ್ರುತ್, ಸಿ.ಗುರುಮೂರ್ತಿ, ಸಿ.ಡಿ. ಚಂದ್ರಶೇಖರ್, ಸಿ.ಕೆ. ಪುಟ್ಟಸ್ವಾಮಿ ಪಾಲ್ಗೊಂಡಿದ್ದರು.

ಮಂಗಳವಾರ ಮೆರವಣಿಗೆ ಮೂಲಕ ಎಲ್ಲ ದೇವರ ನೂತನ ದೇವಾಲಯ ಪ್ರವೇಶ ಮಾಡಿದವು. ತೀರ್ಥಾಭಿಷೇಕ, ಮೂಲವಿಗ್ರಹ, ಕಳಶ, ತ್ರಿಶೂಲ ಪ್ರತಿಷ್ಠಾಪನೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಓಕಳಿ ಉತ್ಸವ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT