ಪಾವಗಡ: ತಾಲ್ಲೂಕಿನ 5 ಮಂದಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ.

ಪಟ್ಟಣದ ಸಾಯಿರಾಂ ಕಲ್ಯಾಣಮಂಟಪ ಬಳಿಯ 28 ವರ್ಷ ಯುವಕ, ಎಸ್.ಆರ್.ಪಾಳ್ಯದ 38 ವರ್ಷದ ಮಹಿಳೆ, ಇದೇ ಗ್ರಾಮದ 5 ವರ್ಷ ವಯಸ್ಸಿನ ಬಾಲಕ, 63 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿದೆ. ತಾಲ್ಲೂಕಿನ ಸೂಲನಾಯಕನಹಳ್ಳಿಯ 73 ವರ್ಷ ಸೋಂಕು ತಗುಲಿದೆ.

ಇವರಲ್ಲಿ ಸೂಲನಾಯಕನಹಳ್ಳಿಯ 73 ವರ್ಷದ ವೃದ್ಧ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 4 ಮಂದಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಪಟ್ಟಣದ ಸಾಯಿರಾಂ ಕಲ್ಯಾಣ ಮಂಟಪ ಬಡಾವಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. 28 ವರ್ಷ ವಯಸ್ಸಿನ ಯುವಕನ ಮನೆಗೆ ಬೆಂಗಳೂರಿನಿಂದ ಅವರ ಸಹೋದರ ಬಂದಿದ್ದರು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

5 ವರ್ಷದ ಬಾಲಕನಿಗೆ ಚಿಕಿತ್ಸೆ ಕೊಡಿಸಲು ಅವರ ತಾಯಿಯನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ಪ್ರತ್ಯೇಕ ತುರ್ತು ವಾಹನಕ್ಕೆ ಒತ್ತಾಯ: ಪಟ್ಟಣದ ಸೋಂಕಿತ ಯುವಕ ತನಗೆ ಸೊಂಕು ಇಲ್ಲ ಪ್ರತ್ಯೇಕ ತುರ್ತು ವಾಹನದಲ್ಲಿ ಕಳುಹಿಸಿಕೊಡಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಯ ಜತೆ ಮಾತಿನ ಚಕಮಕಿ ನಡೆಸಿದರು. ಸಿಬ್ಬಂದಿ ಸೋಂಕು ದೃಢಪಟ್ಟಿದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಕೊರೊನಾದಿಂದ ಪಾರಾಗಬಹುದು ಎಂದು ಮನವೊಲಿಸಿ ಕಳುಹಿಸಿಕೊಟ್ಟಿದ್ದಾರೆ.

ಸೋಂಕಿತರ ಪತ್ತೆಯಾಗಿರುವ ಸಾಯಿರಾಂ ಕಲ್ಯಾಣಮಂಟಪ ಬಡಾವಣೆಯನ್ನು ಕಂಟೈನ್‌ಮೆಂಟ್ ಝೋನ್ ಮಾಡಲಾಗಿದೆ. ಗ್ರಾಮಗಳನ್ನು ಸೀಲ್‌ಡೌನ್ ಮಾಡಿ, ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ.

ಪಟ್ಟಣದ ಯುವಕನ ಪ್ರಾಥಮಿಕ ಸಂಪರ್ಕದಲ್ಲಿ 16ಕ್ಕೂ ಹೆಚ್ಚಿನ ಮಂದಿ ಇದ್ದರು ಎಂಬುದು ಜನರಲ್ಲಿ ಆತಂಕ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.