ಶನಿವಾರ, ಮಾರ್ಚ್ 25, 2023
30 °C

ಚಿಕ್ಕನಾಯಕನಹಳ್ಳಿ: ತೆಂಗಿನಮರ ಮೈಮೇಲೆ ಬಿದ್ದು ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕನಾಯಕನಹಳ್ಳಿ: ಮೈಮೇಲೆ ಒಣಗಿದ ತೆಂಗಿನ ಮರ ಬಿದ್ದು ವ್ಯಕ್ತಿಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. 

ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇಗುಲದ ಧರ್ಮದರ್ಶಿ ಸಿ.ಪಿ. ಚಂದ್ರಶೇಖರ ಶೆಟ್ರು (79) ಮೃತಪಟ್ಟವರು.

ಬೆಳಿಗ್ಗೆ ತಮ್ಮ ತೋಟಕ್ಕೆ ಹೋಗಿದ್ದ ವೇಳೆ ತೆಂಗಿನಮರ ಅವರ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ತೋಟಕ್ಕೆ ಹೋದವರು ಮನೆಗೆ ಬಾರದೆ ಇದ್ದಾಗ ಅವರ ಪುತ್ರ ಹಾಗೂ ಮೊಮ್ಮಗ ಗಾಬರಿಯಿಂದ ಹೋಗಿ ನೋಡಿದಾಗ ದುರ್ಘಟನೆ ನಡೆದಿರುವುದು
ಗೊತ್ತಾಗಿದೆ.

ಮೃತರು ಪುರಸಭೆ ಮಾಜಿ ಸದಸ್ಯ, ಟೌನ್ ಸಹಕಾರ ಸಂಘದ ಅಧ್ಯಕ್ಷ, ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಹಾಗೂ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ಜಮೀನಿನಲ್ಲಿ ಅಂತಿಮ ಸಂಸ್ಕಾರ ನೆರವೇರಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು