ತುಮಕೂರು: ನಗರದ ವಿವಿಧೆಡೆ ಗಾಂಜಾ, ಮಾದಕ ವಸ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗಂಗಸಂದ್ರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಬೆಂಗಳೂರಿನ ಶೇಖ್ ಸಾಹಿಲ್ ಅಕ್ಬರ್ (24), ಫಾರೂಖ್ ಹುಸೇನ್ (45), ನಗರದ ವಸೀಂ (27), ರೋಷನ್ ಸಮೀರ್ (29), ನಯಿಮ್ (38), ಮೈಸೂರಿನ ಶೋಯೆಬ್ (22) ಎಂಬುವರನ್ನು ತಿಲಕ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹11 ಲಕ್ಷ ಮೌಲ್ಯದ 8 ಕೆ.ಜಿ ಗಾಂಜಾ ಸೊಪ್ಪು, ₹78 ಸಾವಿರ ಬೆಲೆಯ 12 ಗ್ರಾಂ ಎಂಡಿಎಂಎ ಮಾದಕ ವಸ್ತು, ₹14 ಲಕ್ಷದ 2 ಕಾರು ಜಪ್ತಿ ಮಾಡಿದ್ದಾರೆ.

‘ಮಹಾರಾಷ್ಟ್ರ, ಒಡಿಶಾ, ಛತ್ತೀಸಗಡ ರಾಜ್ಯಗಳಿಂದ ಗಾಂಜಾ, ಮಾದಕ ವಸ್ತು ತರುತ್ತಿದ್ದರು. ನಗರದ ವಿವಿಧೆಡೆ, ಹೊರವಲಯದ ಶಾಲಾ– ಕಾಲೇಜು ಸಮೀಪ ಮಾರಾಟ ಮಾಡುತ್ತಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಇಲ್ಲಿ ಗುರುವಾರ ತಿಳಿಸಿದರು.

‘ತಿಲಕ್ಪಾರ್ಕ್ ಠಾಣೆ ಇನ್ಸ್ಪೆಕ್ಟರ್ ಜಿ.ಪುರುಷೋತ್ತಮ, ಸಬ್ ಇನ್ಸ್ಪೆಕ್ಟರ್ಗಳಾದ ಸಂಜಯ್ಕುಮಾರ್ ಕಾಂಬ್ಳೆ, ಪದ್ಮಾವತಿ, ಸಿಬ್ಬಂದಿ ನಿಜಾಮ್ ಉದ್ದೀನ್, ರಾಮಕೃಷ್ಣ, ಶಶಿಕುಮಾರನಾಯ್ಕ, ಮಂಜುನಾಥ, ಲೋಕೇಶ್ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

37 ಪ್ರಕರಣ: ನಗರ ಠಾಣೆ ವ್ಯಾಪ್ತಿಯಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 5 ಮಂದಿ ಬಂಧಿಸಿ, 1 ಲಕ್ಷ ಬೆಲೆ ಬಾಳುವ 23 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ. ಬೆಂಗಳೂರಿನ ಆಯಿಷಾ, ವೇಣುರಾಜು, ರಾಕೇಶ್, ಸೈಯದ್ ಸ್ಕಕ್ಲೈನ್, ನಗರದ ಸಲ್ಮಾನ್ ಬಂಧಿತರು. ಗಾಂಜಾ ಸೇವನೆ ಮಾಡುತ್ತಿದ್ದ 37 ಜನರ ಮೇಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ನಗರ ಠಾಣೆ ಇನ್ಸ್ಪೆಕ್ಟರ್ ವಿ.ಅವಿನಾಶ್, ಪಿಎಸ್ಐ ಮಂಜುಳಾ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದರು.