ಚಿಕ್ಕನಾಯಕನಹಳ್ಳಿ: ಡಿಸೆಂಬರ್ 12ರಿಂದ 15ರವರೆಗೆ ನಾಲ್ಕು ದಿನ ‘ಯಾಂತ್ರೀಕೃತ ಉಣ್ಣೆ ಕಟಾವು ತರಬೇತಿ’ಗೆ ಚಾಲನೆ ನೀಡಲಾಯಿತು.

ಪಟ್ಟಣದಲ್ಲಿ ಶುಕ್ರವಾರ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ನಡೆದ ‘ಯಾಂತ್ರಿಕೃತ ಉಣ್ಣೆ ಕಟಾವು ತರಬೇತಿ’ ಕಾರ್ಯಕ್ರಮದಲ್ಲಿ ಕುರಿ ಸಾಕಾಣಿಕೆ ಮಾಡುವ ಪಶು ಪಾಲಕರು ಹಾಗೂ ಯುವಕರಿಗೆ ಆಧುನಿಕ ಯಂತ್ರಗಳ ಬಳಕೆಯ ಮೂಲಕ ಉಣ್ಣೆ ಕಟಾವು ಮಾಡುವ ಕೌಶಲ ಕಲಿಸುವುದು, ಕೈಯಿಂದ ಕಟಾವು ಮಾಡುವುದಕ್ಕಿಂತ ಕಡಿಮೆ ಸಮಯದಲ್ಲಿ ಹೆಚ್ಚು ಉಣ್ಣೆ ಕಟಾವು ಮಾಡುವುದು. ಉಣ್ಣೆಯ ಗುಣಮಟ್ಟವನ್ನು ಉತ್ತಮಪಡಿಸುವುದರ ಕುರಿತು ತರಬೇತಿ ನೀಡಲಾಯಿತು.

ಯಾಂತ್ರಿಕೃತ ಕಟಾವು ಮಾಡುವಾಗ ಉಣ್ಣೆಯಲ್ಲಿ ಕಶ್ಮಲಗಳು ಬೆರೆಯುವುದು ಕಡಿಮೆಯಾಗುತ್ತದೆ. ಕುರಿಗಳಿಗೆ ಯಾವುದೇ ಗಾಯವಾಗದಂತೆ ಸುರಕ್ಷಿತವಾಗಿ ಕಟಾವು ಮಾಡುವ ವಿಧಾನವಾಗಿದೆ. ಇದರಿಂದ ಕುರಿ ಸಾಕಾಣೆದಾರರ ಆರ್ಥಿಕ ಲಾಭವು ಹೆಚ್ಚಾಗಲಿದೆ ಎಂದು ತಿಳಿಸಲಾಯಿತು.

ರಘುಪತಿ ಮಾತನಾಡಿ, ಕುರಿ ಉದ್ಯಮವಿದೆ ಆದರೆ ಕಸುಬುದಾರರಿಲ್ಲ. ಹಾಗಾಗಿ ಅನಿವಾರ್ಯವಾಗಿ ಯಂತ್ರಗಳ ಕಡೆ ಯಾಂತ್ರಿಕೃತ ಉಣ್ಣೆಕಟ್ಟಾವು ಮಾಡಬೇಕಿದೆ. ಇದಕ್ಕೆಲ್ಲ ಸೂಕ್ತ ತರಬೇತಿ ಬೇಕಾಗಿದೆ. ಯಂತ್ರಗಳ ಅವಶ್ಯಕತೆ ಇದೆ. ಇದರಿಂದ ಸ್ವಯಂ ಉದ್ಯೋಗ ಕಲ್ಪಿಸುವಂತಾಗುತ್ತದೆ. ಆಯಾ ಭಾಗದಲ್ಲಿ ಕುರಿ ಉಣ್ಣೆ ಕತ್ತರಿಸಲು ತರಬೇತಿ ನೀಡಿದರೆ ಸ್ವಯಂ ಉದ್ಯೋಗ ಕಲ್ಪಿಸಿದಂತಾಗುತ್ತದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ವೈ.ಜಿ. ಕಾಂತರಾಜು ಹೇಳಿದರು.

ತರಬೇತುದರರಾದ ದೊಡ್ಡಹೋಬಯ್ಯಾ, ರೇವಣಸಿದ್ದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ ಸಿದ್ದಪ್ಪ, ಜ್ಯೋತಿಬಾ ಫುಲೆ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ ಷಣ್ಮುಖಯ್ಯ, ಕಾರ್ಯದರ್ಶಿ ಗಂಗಾಧರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.