ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೃತ ಸರೋವರದ ಅಂಗಳದಲ್ಲಿ ‘ಯೋಗ’

Published 22 ಜೂನ್ 2024, 4:43 IST
Last Updated 22 ಜೂನ್ 2024, 4:43 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ವಿವಿಧ ಕಡೆಗಳಲ್ಲಿ ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ಅಮೃತ ಸರೋವರದ ಅಂಗಳದಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ತಾಲ್ಲೂಕಿನ ಹರಳೂರು, ಮಧುಗಿರಿ ತಾಲ್ಲೂಕಿನ ಬಿಜವರ, ಗಂಜಲಗುಂಟೆ, ಕೊಡಗದಾಲ, ಚಿನ್ನೇನಹಳ್ಳಿ, ಕೊರಟಗೆರೆಯ ವಡ್ಡಗೆರೆ, ಶಿರಾದ ರತ್ನಸಂದ್ರ, ತುರುವೇಕೆರೆಯ ಮಾದಿಹಳ್ಳಿ, ಚಿಕ್ಕನಾಯಕನಹಳ್ಳಿಯ ದುಗಡಿಹಳ್ಳಿ, ಪಾವಗಡದ ತಿರುಮಣಿ ಗ್ರಾಮ ಪಂಚಾಯಿತಿ ಸೇರಿ ವಿವಿಧ ಕಡೆ ಯೋಗಾಭ್ಯಾಸ ಮಾಡಲಾಯಿತು.

ಸರೋವರದ ಸುತ್ತಮುತ್ತಲಿನ ಶಾಲೆಗಳ ಮಕ್ಕಳು, ಶಿಕ್ಷಕರು, ಸಾರ್ವಜನಿಕರು, ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT