ಶನಿವಾರ, ಜೂನ್ 25, 2022
21 °C

ರೇವಣ್ಣ, ಪರಮೇಶ್ವರ ಅವರ ಹತ್ತಾರು ಅಕ್ರಮ ಬಯಲು ಮಾಡುವೆ: ಕೆ.ಎನ್‌.ರಾಜಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೆಎಂಎಫ್‌ ಅಧ್ಯಕ್ಷರಾಗಿದ್ದ ಎಚ್‌.ಡಿ.ರೇವಣ್ಣ ಹಾಗೂ ಡಿಸಿಎಂ ಜಿ. ಪರಮೇಶ್ವರ ಅವರ ಅಕ್ರಮಗಳನ್ನು ಬಯಲು ಮಾಡುವೆ ಎಂದು ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಅವರು ಇಬ್ಬರ ವಿರುದ್ಧ ವಾಗ್ದಾಳಿ ಮಾಡಿದರು.

ಡಿಸಿಸಿ ಬ್ಯಾಂಕ್‌ ಸೂಪರ್‌ ಸೀಡ್‌ ಮಾಡಿರುವ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ರಾಜಣ್ಣ, ರೇವಣ್ಣ ಮತ್ತು ಪರಮೇಶ್ವರ ಅವರ ಅಕ್ರಮಗಳ ಬಗ್ಗೆ ಹೇಳಿದರು.

ಇದನ್ನೂ ಓದಿ: ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್

‘ಎಚ್.ಡಿ.ರೇವಣ್ಣ ಕೆಎಂಎಫ್ ಅಧ್ಯಕ್ಷನಾಗಿದ್ದಾಗ ಸಾಕಷ್ಟು ಅಕ್ರಮ ಮಾಡಿದ್ದಾನೆ. ತನಿಖೆಯಾಗಿ ವರದಿ ಕೂಡಾ ಬಂದಿದೆ. ನೇಮಕಾತಿ, ಹಣ ದುರ್ಬಳಕೆ ಮಾಡಿಕೊಂಡಿದ್ದಾನೆ’ ಎಂದು ರಾಜಣ್ಣ ಆಪಾದಿಸಿದರು.

‘ಡಾ.ಜಿ.ಪರಮೇಶ್ವರ ಅವರು ನೆಲಮಂಗಲ ಸಮೀಪ ಬೇಗೂರಿನಲ್ಲಿ ಅರ್ಕಾವತಿ ಜಮೀನನ್ನು ಆಸ್ಪತ್ರೆ ಉದ್ದೇಶಕ್ಕೆ ಪಡೆದು ಹೊಟೇಲ್, ಕಾಂಪ್ಲೆಕ್ಸ್ ಕಟ್ಟಿದ್ದಾರೆ. ತುಮಕೂರಿನಲ್ಲಿ ಹೆಗ್ಗೆರೆ ಮೆಡಿಕಲ್ ಕಾಲೇಜು, ಮರಳೂರು ಸಮೀಪ ರಿಂಗ್ ರಸ್ತೆಯನ್ನೇ ಒತ್ತುವರಿ ಮಾಡಿದ್ದಾರೆ. ಇಂತಹ ಹತ್ತಾರು ಅಕ್ರಮಗಳನ್ನು ಮಾಡಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ’ ಎಂದು ರಾಜಣ್ಣ ಹಲವು ಸಂಗತಿಗಳನ್ನು ಬಿಚ್ಚಿಟ್ಟರು.

ಇದನ್ನೂ ಓದಿ: ರಾಜಕೀಯ ಸೇಡಿನಿಂದ ಬ್ಯಾಂಕ್ ಸೂಪರ್‌ಸೀಡ್: ದೇವೇಗೌಡ ವಿರುದ್ಧ ರಾಜಣ್ಣ ಆರೋಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು