ಶುಕ್ರವಾರ, ಫೆಬ್ರವರಿ 21, 2020
29 °C

ನಮ್ಮ ನಡುವೆಯೇ ಇದ್ದಾರೆ: ಶ್ರೀಗಳ ಬಳಿ ಸೇವೆ ಸಲ್ಲಿಸಿದ ಮಲ್ಲಾರಾಧ್ಯರ ಮನದಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ತುಮಕೂರು: ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿ ಒಂದು ವರ್ಷವಾಗಿದೆ. ಸ್ವಾಮೀಜಿ ಅವರ ಬಳಿ 20ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಮಲ್ಲಾರಾಧ್ಯ ಅವರಲ್ಲಿ ಶಿವಕುಮಾರ ಶ್ರೀ ‘ನಮ್ಮ ನಡುವೆಯೇ ಇನ್ನೂ ಇದ್ದಾರೆ’ ಎನ್ನುವ ಭಾವ ಇದೆ. ಸ್ವಾಮೀಜಿ ಅವರ ನಿತ್ಯ ಚಟುವಟಿಕೆಗಳಲ್ಲಿ ಹೆಚ್ಚು ಜತೆಯಲ್ಲಿ ಇರುತ್ತಿದ್ದು ಇದೇ ಮಲ್ಲಾರಾಧ್ಯ.

ಸ್ವಾಮೀಜಿ ಅವರ ಸೇವೆಯೇ ಪರಮಸುಖ ಎಂದುಕೊಂಡಿದ್ದ ಮಲ್ಲಾರಾಧ್ಯ ಅವರು ಈ ಒಂದು ವರ್ಷ ಅನುಭವಿಸಿದ ನಿರ್ವಾತ ಹೇಗಿದೆ? ಅವರಿಂದಲೇ ಕೇಳೋಣ.

‘ನನ್ನ ತಂದೆ, ತಾಯಿ ಮಾಡಿದ ಫಲದ ಪರವಾಗಿ ನಾನು ಸ್ವಾಮೀಜಿ ಅವರ ಸೇವೆಗೆ ಸೇರಿಕೊಂಡೆ. 1988ರಿಂದ ಮಠಕ್ಕೆ ಬಂದೆ. 97ರಿಂದ 98ರಿಂದ ಸ್ವಾಮೀಜಿ ಬಳಿ ಸೇರಿದೆ. ಸ್ವಾಮೀಜಿ ಅವರ ದಿನಚರಿ ಆರಂಭವೇ ನಡುರಾತ್ರಿ 2.30ಕ್ಕೆ. ಎಷ್ಟೋ ಸಮಯ ಅವರು ಎದ್ದು ನಮ್ಮನ್ನು ನಿದ್ದೆಯಿಂದ ಎಚ್ಚರಿಸುತ್ತಿದ್ದರು.

ಈಗ ಶಿವಕುಮಾರ ಸ್ವಾಮೀಜಿ ಅವರ ಹಾದಿಯಲ್ಲಿಯೇ ಸಿದ್ದಲಿಂಗ ಸ್ವಾಮೀಜಿ ನಡೆಯುತ್ತಿದ್ದಾರೆ. ಅವರು ಸಹ ಇದೇ ಸಮಯಕ್ಕೆ ಎದ್ದು ಶಿವಪೂಜೆಗೆ ನಿರತರಾಗುತ್ತಿದ್ದಾರೆ.

ಶಿವಕುಮಾರ ಸ್ವಾಮೀಜಿ ಇಲ್ಲದ್ದು ನನ್ನಲ್ಲಿ ಕೆಲವು ವೇಳೆ ‘ಶೂನ್ಯ’ ಎನ್ನುವ ಭಾವ ಮೂಡಿಸಿದರೆ ಮತ್ತೆ ಬಹುತೇಕ ಸಮಯ ನಮ್ಮ ನಡುವೆಯೇ ಇದ್ದಾರೆ. ಅವರ ಕೆಲಸ ಕಾರ್ಯಗಳ ಮೂಲಕ ಎನಿಸುತ್ತದೆ.

ಅವರು ಹಾಕಿಕೊಟ್ಟ ಹಾದಿಯಲ್ಲಿ ನಮ್ಮ ಚಟುವಟಿಕೆಗಳು ನಡೆಯುತ್ತಿವೆ. ನಮಗೆ ಯಾವ ರೀತಿ ಸೇವೆ ಮಾಡಿದ್ದೀಯಾ ಚಿಕ್ಕ ಬುದ್ದಿಯವರಿಗೂ ಸೇವೆ ಮಾಡಬೇಕು ಎಂದು ದಿನಕ್ಕೆ ಎಂಟತ್ತು ಸಲ ಹೇಳುತ್ತಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು