ಶಿರಾ: ತಾಲ್ಲೂಕಿನ ಕೆರೆಯಾಗಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಶಾಂತಮ್ಮ ಗುರುವಾರ ಶಾಲೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.

ಶಿಕ್ಷಕಿ ಶಾಂತಮ್ಮ ಅವರನ್ನು ತೊಗರುಗುಂಟೆ ಶಾಲೆಗೆ ನಿಯೋಜಿಸಲಾಗಿತ್ತು. ಗುರುವಾರ ಕೆರೆಯಾಗಲಹಳ್ಳಿ ಶಾಲೆ ಮುಖ್ಯಶಿಕ್ಷಕ ರಜೆ ಹಾಕಿದ್ದ ಕಾರಣ ಶಿಕ್ಷಕಿ ಶಾಂತಮ್ಮ ಅವರಿಗೆ ಕೆರೆಯಾಗಲಹಳ್ಳಿ ಶಾಲೆಗೆ ಹೋಗುವಂತೆ ಸಿಆರ್ಪಿ ಹೇಳಿದ್ದಾರೆ. ‘ನನ್ನನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿದೆ. ಮತ್ತೆ ನಾನು ಅಲ್ಲಿಗೆ ಹೋಗುವುದಿಲ್ಲ’ ಎಂದು ಶಾಂತಮ್ಮ ಪಟ್ಟು ಹಿಡಿದಾಗ ಅಲ್ಲಿ ಶಿಕ್ಷಕರು ಯಾರು ಇಲ್ಲ ಹೋಗದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಆರ್ಪಿ ಹೇಳಿದ್ದಾರೆ. ಒಲ್ಲದ ಮನಸ್ಸಿನಿಂದ ಶಾಲೆಗೆ ಹೋದ ಶಿಕ್ಷಕಿ ಶಾಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.