ಕೊರಟಗೆರೆ: ಶಿಕ್ಷಕ ವಿದ್ಯಾರ್ಥಿಗಳ ಎದೆಯಲ್ಲಿ ಅಕ್ಷರ ಬಿತ್ತುವ ಬ್ರಹ್ಮ. ಪ್ರಪಂಚದ ಎಲ್ಲ ಹುದ್ದೆಗಳೂ ವಂದಿಸುವ ಅತ್ಯಂತ ಶ್ರೇಷ್ಠ ಹುದ್ದೆ ಶಿಕ್ಷಕನದ್ದು ಎಂದು ಸಾಹಿತಿ ಮ.ಲ.ನ.ಮೂರ್ತಿ ತಿಳಿಸಿದರು.

ಪಟ್ಟಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಯಿಂದ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.

ದೇಶದ ಭವಿಷ್ಯ ಶಿಕ್ಷಕರ ಕೈಲಿದೆ. ಶಿಕ್ಷಕ ಜ್ಞಾನದ ಬೆಳಕು. ಬೆಳಕಿನ ಉರಿಯಿಲ್ಲದೆ ಇತರರಿಗೆ ಬೆಳಕಾಗುವುದು ಅಸಾಧ್ಯ. ಆದುದರಿಂದ ಶಿಕ್ಷಕರಾದವರು ತಮ್ಮ ವೃತ್ತಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕಿದೆ. ತನ್ನ ಕೆಲಸದ ಮೇಲೆ ಗೌರವ, ತನ್ನ ಪಾಠದ ಬಗ್ಗೆ ಆತ್ಮವಿಶ್ವಾಸ ಇದ್ದಾಗ ಇಡೀ ಸಮಾಜವನ್ನು ಬದಲಾವಣೆಯತ್ತ ಕೊಂಡೊಯ್ಯುವ ಶಕ್ತಿ ಶಿಕ್ಷಕರಿಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಸಿ., ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ.ಹನುಮಂತರಾಯಪ್ಪ, ಗ್ರೇಡ್-2 ತಹಶೀಲ್ದಾರ್ ರಾಮಪ್ರಸಾದ್ ಮಾತನಾಡಿದರು. ನಿವೃತ್ತಿ ಹೊಂದಿದ ಶಿಕ್ಷಕರನ್ನು ಗೌರವಿಸಲಾಯಿತು. ಉತ್ತಮ ಶಿಕ್ಷಕರಿಗೆ ತಾಲ್ಲೂಕು ಮಟ್ಟದ ಪ್ರಶಸ್ತಿ ನೀಡಲಾಯಿತು.

ನೌಕರರ ಸಂಘದ ಅಧ್ಯಕ್ಷ ಎಚ್.ಎಂ.ರುದ್ರೇಶ್, ಬಿಇಒ ಫೈರೋಜ್ ಬೇಗಂ, ಬಿ.ಆರ್.ಸಿ. ರುದ್ರೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ವಜೀರ್ ಖಾನ್, ಅಕ್ಷರ ದಾಸೋಹ ಅಧಿಕಾರಿ ಮಹೇಶ್ವರಿ, ಶಿಕ್ಷಣ ಇಲಾಖೆಯ ವಿವಿಧ ಸಂಘಟನೆಗಳ ಪ್ರಮುಖರಾದ ಜೆ.ಎನ್.ನರಸಿಂಹರಾಜು, ಪರಮೇಶ್, ಲಕ್ಷ್ಮೀಪುತ್ರ, ತಿಪ್ಪೇಸ್ವಾಮಿ, ರಾಧಮ್ಮ, ಕೋಟೆ ಕಲ್ಲಯ್ಯ, ಧರ್ಮೇಂದ್ರ ಪ್ರಸಾದ್, ದೇವರಾಜಯ್ಯ, ಗುಂಡೂರಾವ್, ಟಿ.ಆರ್.ಸುಜಾತ, ಚಂದ್ರಯ್ಯ ಗಿರೀಶ್, ಸೌಮ್ಯ, ಈಶ್ವರಯ್ಯ, ಜವರಯ್ಯ, ಕೆ.ಹನುಮಂತರಾಯಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.