ಮಂಗಳವಾರ, ಜೂನ್ 28, 2022
26 °C

ಶಿರಾ ನಗರಸಭೆ ಉಪಚುನಾವಣೆ ಮತದಾನ ಪ್ರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಶಿರಾ ನಗರಸಭೆಯ ವಾರ್ಡ ನಂ 21ರ  ಉಪಚುನಾವಣೆ ಮತದಾನ ಶುಕ್ರವಾರ ಬೆಳಿಗ್ಗೆ ಪ್ರಾರಂಭವಾಗಿದ್ದು ಶಾಂತ ರೀತಿಯಿಂದ ನಡೆಯುತ್ತಿದೆ.

ನಗರಸಭೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಚಾಂದ್ ಪಾಷ ನಿಧನದಿಂದಾಗಿ ಚುನಾವಣೆ ಮುಂದೂಡಲಾಗಿತ್ತು. 

ನಗರದ ಅಸಾರ್ ಮೊಹಲ್ಲಾದ ಸರ್ಕಾರಿ ಉರ್ದು ಮಾದರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ತೆರೆಯಲಾಗಿದೆ.

ತುಂತುರು ಮಳೆಯಲ್ಲಿ ಜನರು ಉತ್ಸುಕರಾಗಿ ಬಂದು ಮತದಾನ ಮಾಡುತ್ತಿದ್ದಾರೆ.  ಕಾಂಗ್ರೆಸ್ ಪಕ್ಷದಿಂದ ನಗರಸಭೆ ಮಾಜಿ ಅಧ್ಯಕ್ಷ ದಿ.ಚಾಂದ್ ಪಾಷ ಪುತ್ರ ಇರ್ಷಾದ್ ಪಾಷ, ಜೆಡಿಎಸ್ ಪಕ್ಷದಿಂದ ಎಚ್.ವಾಸಿಲ್ ಅಹಮದ್ ಹಾಗೂ ಪಕ್ಷೇತರರಾಗಿ ಲುತ್ ಫುಲ್ಲಾ ಕಣದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು