ಮಂಗಳವಾರ, ಮೇ 26, 2020
27 °C
ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಸರಬರಾಜು

ತುಮಕೂರು: ಬಡವರಿಗೆ 95 ಸಾವಿರ ಲೀಟರ್ ಹಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ರಾಜ್ಯ ಸರ್ಕಾರದ ನಿರ್ಧಾರದಂತೆ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) 95,000 ಲೀಟರ್‌ ಹಾಲನ್ನು ಬಡವರು, ಕೊಳೆಗೇರಿ ನಿವಾಸಿಗಳ ಮನೆಬಾಗಿಲಿಗೆ ತಲುಪಿಸಲು ಸಿದ್ಧವಾಗಿದೆ.

ತುಮುಲ್‌ನಲ್ಲಿ ಒಂದು ಲೀಟರ್‌ ಹಾಲಿನ ವಿಶೇಷ ಪ್ಯಾಕೆಟ್‌ಗಳು ತಯಾರಾಗಲಿವೆ. ಅವುಗಳಲ್ಲಿ 70 ಸಾವಿರ ಲೀಟರ್‌ ಹಾಲನ್ನು ಬೆಂಗಳೂರಿಗೆ, ಉಳಿದ 25 ಸಾವಿರ ಲೀಟರ್‌ ಹಾಲನ್ನು ತುಮಕೂರಿನಲ್ಲಿನ ಬಡವರಿಗೆ ಏಪ್ರಿಲ್‌ 3ರಿಂದ ಹಂಚಲು ನಿರ್ಧರಿಸಲಾಗಿದೆ. ಫಲಾನುಭವಿಗಳನ್ನು ಸ್ಥಳೀಯಾಡಳಿತ ಗುರುತಿಸಲಿದೆ. ಆ ಪ್ರದೇಶದವರೆಗೆ ತುಮುಲ್‌ ಹಾಲು ಸರಬರಾಜು ಮಾಡಲಿದೆ.

ಲಾಕ್‌ಡೌನ್‌ನಿಂದ ಹಾಲು ಉತ್ಪಾದಕರ ಆದಾಯ ಕುಸಿಯಬಾರದು, ಬಡವರಿಗೂ ಪೌಷ್ಟಿಕಾಂಶ ಭರಿತ ಆಹಾರ ಪದಾರ್ಥ ಸಿಗಬೇಕು ಎಂಬ ಕಾರಣಕ್ಕೆ ರಾಜ್ಯ ಸರ್ಕಾರವು ಉಚಿತವಾಗಿ ಹಾಲು ವಿತರಣೆಗೆ ಮುಂದಾಗಿದೆ.

ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್‌) ಸಹಕಾರದೊಂದಿಗೆ 7.5 ಲಕ್ಷ ಲೀಟರ್‌ ಹಾಲನ್ನು ಉತ್ಪಾದಕರ ಸಂಘಗಳ ಒಕ್ಕೂಟದ ಮೂಲಕ ಖರೀದಿಸಿ ನಿತ್ಯ ವಿತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಹಾಗಾಗಿ 95,000 ಲೀಟರ್ ಹಾಲು ಪೂರೈಸುವಂತೆ ಕೆಎಂಎಫ್‌ ಸಂಸ್ಥೆಯು ತುಮುಲ್‌ಗೆ ತಿಳಿಸಿದೆ.

ಉಚಿತ ಹಾಲನ್ನು ಲಾಕ್‌ಡೌನ್‌ನಿಂದ ಸಂತ್ರಸ್ತರಾದವರಿಗೆ ಮಾತ್ರ ಕೊಡಬೇಕಿದೆ. ಹಾಗಾಗಿ ಹಾಲಿನ ವಿಶೇಷ ಪ್ಯಾಕೆಟ್‌ ಮೇಲೆ ‘ಮಾರಾಟಕ್ಕಾಗಿ ಅಲ್ಲ’ ಎಂಬ ಬರಹ ಇರಲಿದೆ
ಸಿ.ವಿ.ಮಹಾಲಿಂಗಯ್ಯ, ತುಮುಲ್ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು