ತುಮಕೂರು: ತರಕಾರಿ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದ್ದರೆ, ಸೊಪ್ಪು ಸ್ವಲ್ಪ ದುಬಾರಿಯಾಗಿದೆ. ಧಾನ್ಯ, ಹಣ್ಣುಗಳು, ಕೋಳಿ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಕಳೆದ ಎರಡು ವಾರದಿಂದ ಇಳಿಕೆಯತ್ತ ಸಾಗಿದ್ದ ಬೀನ್ಸ್ ಬೆಲೆ ಕೆ.ಜಿ.ಗೆ ₹10, ಕ್ಯಾರೇಟ್ ₹10, ಗೆಡ್ಡೆಕೋಸು ಬೆಲೆ ಕಡಿಮೆಯಾಗಿದ್ದರೆ, ಕ್ಯಾಪ್ಸಿಕಂ ಕೆ.ಜಿ ₹10, ಬೀಟ್ರೂಟ್, ಹಾಗಲಕಾಯಿ, ಬೆಂಡೆಕಾಯಿ ಅಲ್ಪ ಏರಿಕೆ ಕಂಡಿದೆ. ಸೊಪ್ಪಿನ ಬೆಲೆಗಳು ಏರಿಕೆ ಕಂಡಿದ್ದು, ಕೊತ್ತಂಬರಿ ಸೊಪ್ಪು ಕೆ.ಜಿ ₹35–40, ಮೆಂತ್ಯ ಸೊಪ್ಪು ಕೆ.ಜಿ.ಗೆ ₹30 ಹೆಚ್ಚಳವಾಗಿ ₹60ಕ್ಕೆ ತಲುಪಿದೆ. ಸಬ್ಬಕ್ಕಿ ಕೆ.ಜಿ ₹20, ಪಾಲಕ್ ಸೊಪ್ಪಿನ ಬೆಲೆ ಕೆ.ಜಿ ₹30ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ.

ಈಗ ಹಬ್ಬದ ಸೀಸನ್ ಮುಗಿದ್ದು, ಧಾನ್ಯಗಳ ಬೆಲೆಯಲ್ಲಿ ಹೆಚ್ಚು ಕಡಿಮೆ ಸ್ಥಿರತೆ ಮುಂದುವರೆದಿದೆ. ಅಲಸಂದೆ, ಬಟಾಣಿ, ಕಡಲೆ ಬೀಜ ಸ್ವಲ್ಪ ದುಬಾರಿಯಾಗಿದೆ. ಸನ್‌ಫ್ಲವರ್ ಕೆ.ಜಿ ₹145– 150, ಪಾಮಾಯಿಲ್ ₹122– 125ಕ್ಕೆ ಮಾರಾಟವಾಗುತ್ತಿದ್ದು, ಕೊಂಚ ಇಳಿಕೆಯಾಗಿದೆ. ಒಣ ಹಣ್ಣುಗಳ ಬೆಲೆ ಅಲ್ಪ ಪ್ರಮಾಣದಲ್ಲಿ ತಗ್ಗಿದ್ದು, ದ್ರಾಕ್ಷಿ ಕೆ.ಜಿ ₹220– 250, ಬಾದಾಮಿ ಕೆ.ಜಿ ₹820– 850, ಗೋಡಂಬಿ ಕೆ.ಜಿ ₹700– 750ಕ್ಕೆ ಮಂಡಿಪೇಟೆಯಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಬೆಲೆ ಸ್ಥಿರ: ಏರಿಕೆ ಕಂಡ ನಂತರ ಕೋಳಿ ಬೆಲೆ ಇಳಿಕೆಯಾಗುತ್ತಿಲ್ಲ. ಬಹುತೇಕ ಸ್ಥಿರತೆ ಕಾಪಾಡಿಕೊಂಡಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹175ಕ್ಕೆ, ರೆಡಿ ಚಿಕನ್ ₹260ಕ್ಕೆ, ಮೊಟ್ಟೆ ಕೋಳಿ ಕೆ.ಜಿ ₹140ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಮೀನು ಖಾಲಿ: ನಗರದ ಮತ್ಸ್ಯದರ್ಶಿನಿಯಲ್ಲಿ ಮೀನು ಖಾಲಿಯಾಗಿದ್ದು, ಮಂಗಳವಾರದ ನಂತರ ಮಾರುಕಟ್ಟೆಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.