ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ 41 ಮಂದಿಗೆ ಕೋವಿಡ್‌ ಸೋಂಕು

ಪ್ರಾಥಮಿಕ ಸಂಪರ್ಕದಿಂದ ಸೋಂಕು ಹೆಚ್ಚಳ:
Last Updated 12 ಜುಲೈ 2020, 15:02 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ತಾಲ್ಲೂಕಿನ 26, ಕುಂದಾಪುರದ 11 ಹಾಗೂ ಕಾರ್ಕಳದ ನಾಲ್ವರು ಸೇರಿ ಜಿಲ್ಲೆಯಲ್ಲಿ ಭಾನುವಾರ 41 ಮಂದಿಯಲ್ಲಿ ಭಾನುವಾರ ಕೋವಿಡ್‌–19 ಸೋಂಕು ದೃಢಪಟ್ಟಿದೆ.‌

ಮುಂಬೈನಿಂದ ಜಿಲ್ಲೆಗೆ ಬಂದಿದ್ದ ಇಬ್ಬರಲ್ಲಿ, ಸೌದಿಯಿಂದ ಬಂದಿದ್ದ ಒಬ್ಬರಲ್ಲಿ, ಅಂತರ ಜಿಲ್ಲಾ ಪ್ರಯಾಣ ಬೆಳೆಸಿದ ಆರು ವ್ಯಕ್ತಿಗಳಲ್ಲಿ ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 32 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರಲ್ಲಿ 26 ಪುರುಷರು, 11 ಮಹಿಳೆಯರು ಹಾಗೂ ನಾಲ್ವರು ಮಕ್ಕಳು ಇದ್ದಾರೆ.

ಸೋಂಕಿನ ಲಕ್ಷಣಗಳು ಇಲ್ಲದವರನ್ನು ಆಯಾ ತಾಲ್ಲೂಕಿನ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಲಕ್ಷಣಗಳು ಇರುವವರಿಗೆ ಉಡುಪಿಯ ಡಾ.ಟಿಎಂಎ ಪೈ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಭಾನುವಾರ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಾಗೂ ಕೋವಿಡ್‌ ಹಾಟ್‌ಸ್ಪಾಟ್‌ಗಳ ಸಂಪರ್ಕವಿರುವ 269 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಗಳಿಗೆ ರವಾನಿಸಲಾಗಿದೆ. 1,856 ವರದಿಗಳು ಬರುವುದು ಬಾಕಿ ಇದೆ.

ತೀವ್ರ ಉಸಿರಾಟದ ಸಮಸ್ಯೆ ಕಂಡುಬಂದ ಹಾಗೂ ಶೀತಜ್ವರ ಲಕ್ಷಣಗಳಿದ್ದ 15 ಪುರುಷರು ಹಾಗೂ 7 ಮಹಿಳೆಯರಿಗೆ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,608ಕ್ಕೇರಿಕೆಯಾಗಿದ್ದು, ಭಾನುವಾರ 28 ಮಂದಿ ಸೇರಿ ಇದುವರೆಗೂ ಸೋಂಕಿನಿಂದ 1,273 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 332 ಸಕ್ರಿಯ ಸೋಂಕಿತ ಪ್ರಕರಣಗಳು ಇವೆ.

ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆ

ದಾವಣಗೆರೆಯಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಬಂದು ಮೃತಪಟ್ಟ ಕೋವಿಡ್ ಸೋಂಕಿತ ವೃದ್ಧನ ಅಂತ್ಯಕ್ರಿಯೆಯನ್ನು ಭಾನುವಾರ ಜಿಲ್ಲಾ ಪಿಎಫ್‌ಐ ಕಾರ್ಯಕರ್ತರ ತಂಡ ನೆರವೇರಿಸಿತು. ಪಿಪಿಇ ಕಿಟ್‌ ಧರಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದ ತಂಡ ಖಬರಸ್ತಾನದಲ್ಲಿ ಶವ ಸಂಸ್ಕಾರ ಮಾಡಿತು.

ಆರೋಗ್ಯ ತಪಾಸಣೆ–19

ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾ–0

ಗುಣಮುಖರಾದವರು–28

ಹೊಸ ಸೇರ್ಪಡೆ-22

ಹೋಂ ಕ್ವಾರಂಟೈನ್‌ ಪೂರ್ಣ-0

ಪರೀಕ್ಷೆಗೆ ಕಳುಹಿಸಿದ ಮಾದರಿ–269

ವರದಿ ಪಾಸಿಟಿವ್‌–90

ವರದಿ ನೆಗೆಟಿವ್‌-573

ಆರೋಗ್ಯ ತಪಾಸಣೆ–6,179

ಹೋಂ ಕ್ವಾರಂಟೈನ್‌–1,304

ಮಾದರಿ–22,327

ಪಾಸಿಟಿವ್‌–1,608

ನೆಗೆಟಿವ್‌–18,863

ಸಕ್ರಿಯ ಪ್ರಕರಣ–332

ಮರಣ–3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT