ಹೆಬ್ರಿ: ಒಳ್ಳೆಯ ಕೆಲಸಗಳನ್ನು ಮಾಡಿದಾಗ, ಗೌರವಿಸುವ ದೊಡ್ಡ ಗುಣ ನಮ್ಮದಾಗಬೇಕು. ಪ್ರಯಾಣಿಕರ ಜೀವ ಉಳಿಸಿ ಸಮಾಜಕ್ಕೆ ಮಾದರಿಯಾದ ಸರ್ಕಾರಿ ಬಸ್ ಸಿಬ್ಬಂದಿಯನ್ನು ಗೌರವಿಸುವ ಪುಣ್ಯದ ಕಾರ್ಯ ನನಗೆ ಸಿಕ್ಕಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಈ ಸಾಮಾಜಿಕ ಕೆಲಸ ಎಲ್ಲರಿಗೂ ಪ್ರೇರಣೆಯಾಗಿ, ಸಮಾಜದಲ್ಲಿ ಉತ್ತಮ ಬಾಂಧವ್ಯ ಮೂಡಲಿ ಎಂದು ತುಳಸಿ ಗ್ರೂಪ್ ಅಧ್ಯಕ್ಷ, ಸಮಾಜ ಸೇವಕ ಬೇಳಂಜೆ ಹರೀಶ ಪೂಜಾರಿ ಹೇಳಿದರು.

ಅವರು ಶಾಂತಿನಿಕೇತನ ಯುವವೃಂದ ಕುಡಿಬೈಲು ಕುಚ್ಚೂರು , ರಾಘವೇಂದ್ರ ಚಾರಿಟಬಲ್ ಟ್ರಸ್ಟ್ ವತಿಯಿಂದ ಹೆಬ್ರಿಯ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಈಚೆಗೆ ಬಸ್‌ನಲ್ಲಿ ಅಸ್ವಸ್ಥಗೊಂಡ ಯವತಿಯ ಜೀವ ಉಳಿಸುವಲ್ಲಿ ಪಾತ್ರ ವಹಿಸಿದ ಚಾಲಕ ತಾರೇಶ್, ನಿರ್ವಾಹಕ ವಾಸಿಂ ದೇಸಾಯಿ ಅವರನ್ನು ಗೌರವಿಸಿ ಮಾತನಾಡಿದರು.

ಬಸ್ ನಿರ್ವಾಹಕ ವಾಸಿಂ ದೇಸಾಯಿ ಮಾತನಾಡಿ, ನಮ್ಮ ಕೆಲಸವನ್ನು ಗುರುತಿಸಿ ಗೌರವಿಸಿರುವುದಕ್ಕೆ ಅಭಾರಿಯಾಗಿದ್ದೇವೆ. ಅಂದು ಕೆಲವರು ನೀಡಿದ ಸಹಕಾರದಿಂದ ಈ ಕೆಲಸ ಮಾಡಲು ಸಾಧ್ಯವಾಯಿತು. ಸನ್ಮಾನದಿಂದ ಹೊಣೆಗಾರಿಕೆ ಹೆಚ್ಚಾಗಿದೆ. ಎಲ್ಲರಿಗೂ ಧನ್ಯವಾದ ಎಂದರು.

ವಿಆರ್‌ಎಲ್ ವ್ಯವಸ್ಥಾಪಕ ತಿಪ್ಪೇಸ್ವಾಮಿ, ಶಾಂತಿ ನಿಕೇತನ ಯುವ ವೃಂದದ ಅಧ್ಯಕ್ಷ ದೀಕ್ಷಿತ್ ನಾಯಕ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀದತ್ತ ಶೆಟ್ಟಿ, ಪತ್ರಕರ್ತ ನರೇಂದ್ರ ಎಸ್. ಮರಸಣಿಗೆ, ಪತ್ರಿಕಾ ವಿತರಕ ರಾಘವೇಂದ್ರ ಪೂಜಾರಿ, ಶಾಂತಿನಿಕೇತನದ ರಾಘವೇಂದ್ರ, ಬಸ್ ಏಜೆಂಟರಾದ ವಸಂತ, ಅರವಿಂದ, ಪ್ರವೀಣ್, ಪ್ರಮುಖರಾದ ಸಂತೋಷ್, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸುಧೀರ್, ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.