ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರಿ ಗಾಳಿ, ಮಳೆ: ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಕಡಲ್ಕೊರೆತ

Published : 23 ಜುಲೈ 2023, 14:35 IST
Last Updated : 23 ಜುಲೈ 2023, 14:35 IST
ಫಾಲೋ ಮಾಡಿ
Comments

ಪಡುಬಿದ್ರಿ: ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿಯ ಎಂಡ್ ಪಾಯಿಂಟ್‌ನಲ್ಲಿರುವ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಕಡಲ್ಕೊರೆತ ಉಂಟಾಗಿದ್ದು ಬೀಚ್ ಅಭಿವೃದ್ಧಿ ಕಾಮಗಾರಿಗಳು ಸಮುದ್ರ ಸೇರುತ್ತಿವೆ.

ಭಾನುವಾರ ಭಾರಿ ಗಾಳಿ, ಮಳೆಗೆ ಬೀಚ್ ಬಳಿ ಸಮುದ್ರ ಉಕ್ಕೇರಿ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಬೀಚ್ ಅಭಿವೃದ್ಧಿಗಾಗಿ ನಿರ್ಮಿಸಿದ ಕಾಂಕ್ರೀಟ್ ತಡೆಗೋಡೆ ಸಮುದ್ರ ಪಾಲಾಗುತ್ತಿದೆ. ಇಲ್ಲಿ ಅಳವಡಿಸಿದ ವಾಚಿಂಗ್ ಟವರ್ ಪಕ್ಕದಲ್ಲಿ ಭಾರಿ ಗಾತ್ರದ ಅಲೆಗಳು ಅಪ್ಪಳಿಸುತ್ತಿದೆ. ಪ್ರವಾಸಿಗರ ಅನುಕೂಲತೆಗಾಗಿ ಅಳವಡಿಸಿದ ಹಟ್‌ಗಳು, ಗಿಡಮರಗಳು, ಲೈಟ್ ಕಂಬಗಳು, ಪೈಪ್‌ಲೈನ್, ತಡೆಗೋಡೆ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.

ಜಿಲ್ಲಾಧಿಕಾರಿ ಆದೇಶದಂತೆ ಭಾನುವಾರದಿಂದ ಪ್ರವಾಸಿಗರಿಗೆ ಬೀಚ್ ಪ್ರವೇಶ ಸ್ಥಗಿತಗೊಳಿಸಲಾಗಿದೆ ಎಂದು ಬೀಚ್ ಪ್ರಬಂಧಕ ವಿಜಯ ಶೆಟ್ಟಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ ಪ್ರಬಂಧಕ ವಿಜಯ ಶೆಟ್ಟಿ, ‘ಎರಡು ದಿನಗಳಿಂದ ಕಡಲ್ಕೊರೆತ ಜಾಸ್ತಿ ಇರುವುದರಿಂದ ಪ್ರವಾಸಿಗರಿಗೆ ಸಮುದ್ರ ದಡಕ್ಕೆ ಹೋಗಲು ನಿರ್ಬಂಧ ವಿಧಿಸಿದ್ದೆವು. ಒಳಗಿನ ಗಾರ್ಡನ್ ಏರಿಯಾಕ್ಕೆ ಬರಲು ಅವಕಾಶವಿತ್ತು. ಮುಂಜಾಗ್ರತಾ ಕ್ರಮವಾಗಿ ಭಾನುವಾರ 3 ಗಂಟೆಯಿಂದ ಪ್ರವಾಸಿಗರಿಗೆ ನಿಬಂ೯ಧಿಸಲಾಗಿದೆ. ಹಾಗೇ ಜೋರಾದ ಕಡಲ ಅಲೆಗಳಿಗೆ ರಕ್ಷಣೆಗಾಗಿ ಕಟ್ಟಿದ ಕಲ್ಲಿನ ಕಟ್ಟೆ ಕೊಚ್ಚಿಕೊಂಡು ಹೋಗಿದ್ದು, ವಾಚ್ ಟವರ್ ಕುಸಿಯುವ ಭೀತಿಯಲ್ಲಿದೆ. ಇದರಿಂದ ಸ್ವಲ್ಪ ಮಟ್ಟಿನ ನಷ್ಟವಾಗಿದೆ’ ಎಂದರು.

ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ₹8 ಕೋಟಿ ಖರ್ಚು ಮಾಡಿ ಅಭಿವೃದ್ಧಿ ಪಡಿಸಿದ ಬೀಚ್‌ಗೆ ಬ್ಲೂ ಫ್ಲ್ಯಾಗ್ ಎಂಬ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ದೇಶದ ಹತ್ತು ಬೀಚ್‌ಗಳಲ್ಲಿ ಇದೂ ಒಂದಾಗಿದೆ. ಕಾಮಿನಿ ನದಿ ಮತ್ತು ಸಮುದ್ರದ ನಡುವೆ ಇರುವ ಈ ಪ್ರದೇಶ ಪ್ರವಾಸಿಗರ ಆಕರ್ಷಕ ತಾಣ.

ಪಡುಬಿದ್ರಿ ಬೀಚ್‌ನಲ್ಲೂ ಮುಂದುವರಿದ ಕಡಲ್ಕೊರೆತ: ಪಡುಬಿದ್ರಿಯ ಮುಖ್ಯ ಬೀಚ್‌ನಲ್ಲೂ ಕಡಲ್ಕೊರೆತ ಮತ್ತೆ ಮುಂದುವರಿದಿದ್ದು, ಇಲ್ಲಿನ ಕಾಂಕ್ರೀಟ್ ಹಟ್ ಹಾಗೂ ವಾಚಿಂಗ್ ಟವರ್ ಪಕ್ಕದಲ್ಲಿಯೇ ಕಡಲ್ಕೊರೆತ ಉಂಟಾಗಿದೆ. ಇಲ್ಲಿ ಕಡಲ್ಕೊರೆತಕ್ಕೆ ಕಳೆದ ವಾರ ಹಾಕಲಾದ ಕಲ್ಲುಗಳು ಸಮುದ್ರದ ಒಡಲು ಸೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT