ಬ್ರಹ್ಮಾವರ: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆ ಸಂಭ್ರಮಾಚರಣೆ ಪ್ರಯುಕ್ತ ಕೋಡಿ ಬೆಂಗ್ರೆಗೆ ಹೊಸದಾಗಿ ಪ್ರಾರಂಭಗೊಂಡ ಸರ್ಕಾರಿ ಬಸ್ ಸೇವೆಗೆ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಎ. ಕುಂದರ್ ಚಾಲನೆ ನೀಡಿದರು.

ಅವರು ಮಾತನಾಡಿ, ಸರ್ಕಾರವು ಮಹಿಳೆಯರಿಗೆ ನೀಡಿರುವ ಉಚಿತ ಬಸ್ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಈ ಭಾಗದಲ್ಲಿ ಇನ್ನಷ್ಟು ಸರ್ಕಾರಿ ಬಸ್ಗಳು ಓಡಾಡುವ ಹಾಗೆ ಜನರು ಸಹಕರಿಸಬೇಕು ಎಂದರು.

ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಮೇಶ್ ತಿಂಗಳಾಯ ಅವರು ಚಾಲಕ ರಾಮ, ನಿರ್ವಾಹಕ ಮಲ್ಲಿಕಾರ್ಜುನ ಅವರಿಗೆ ಹೂ ನೀಡಿ ಗೌರವಿಸಿದರು. ಮಹಿಳೆಯರು ಬಸ್ಗೆ ದೀಪ ಬೆಳಗಿಸಿ ಸಂಭ್ರಮಿಸಿದರು. ಮಹೇಶ್ ಕುಮಾರ್ ಚೂಡ ಖಾರ್ವಿ, ಹರೀಶ್ ಕುಂದರ್, ಅನಿಲ್ ಕುಮಾರ್ ಭಾರತಿ, ಲತಾ, ವೀಣಾ, ರಶ್ಮಿ, ರತ್ನಾ, ಸಂಧ್ಯಾ ಬಾನು ಚಂದ್ರಾವತಿ, ಲಲಿತಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.