ಕುಂದಾಪುರ: ‘ದೀಪಕ್ ಕುಮಾರ್ ಶೆಟ್ಟಿ ಅವರು ಬೈಂದೂರಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ’ ಎಂದು ಉಪ್ಪುಂದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಪ್ರವರ್ತಕ ಯು.ಬಿ.ಶೆಟ್ಟಿ ಹೇಳಿದರು.

ಅವರು ಈಚೆಗೆ ಮುಳ್ಳಿಕಟ್ಟೆಯ ನಗು ಸಿಟಿಯಲ್ಲಿ ಬೈಂದೂರು ತಾಲ್ಲೂಕು ರೈತ ಸಂಘದ ಆಶ್ರಯದಲ್ಲಿ, ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿ, ಬೈಂದೂರು ತಾಲ್ಲೂಕು ಕಂಬಳ ಸಮಿತಿ, ಮರಾಠಿ ಸಮಾಜ, ಗೊಂಡ ಸಮಾಜದ ಸಹಯೋಗದಲ್ಲಿ ನಡೆದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರಾವಳಿ ಜಿಲ್ಲೆಯ ಇತಿಹಾಸದೊಂದಿಗೆ ಮುನ್ನಡೆಯುತ್ತಿರುವ ಕಂಬಳ ಧಾರ್ಮಿಕ ಹಿನ್ನೆಲೆಯೊಂದಿಗೆ, ಸಾಂಸ್ಕೃತಿಕ ಪರಿಕಲ್ಪನೆ, ಪರಂಪರೆ ಹೊಂದಿದೆ. ಎಲ್ಲರನ್ನೂ ಹೊಂದಿಸಿಕೊಂಡು, ಜೋಡಿಸಿಕೊಂಡು ಹೋಗುವುದೇ ಜೋಡುಕರೆ ಕಂಬಳದ ವಿಶೇಷತೆ ಎಂದರು.

ಮುಖಂಡ ಕೆ. ಗೋಪಾಲ ಪೂಜಾರಿ ಮಾತನಾಡಿ, ದೀಪಕ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಜೋಡುಕರೆ ಕಂಬಳ, ಬೆಂಗಳೂರಿನಲ್ಲಿ ನಡೆದ ಕಂಬಳದಷ್ಟೇ ಯಶಸ್ಸನ್ನು ಕಂಡಿದೆ. ಪರಿಸರದ ಜನರಿಗೆ ಹಬ್ಬದ ವಾತಾವರಣ ನೀಡಿದೆ ಎಂದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ ಮಾತನಾಡಿ, ಧಾರ್ಮಿಕ ಸೇವೆಗಳ ಹಿನ್ನೆಲೆಯಲ್ಲಿ ನಡೆಯುವ ಕಂಬಳದ ಮನೆಗಳಲ್ಲಿ ನಮ್ಮದೂ ಒಂದು. ನಗುಸಿಟಿಯಲ್ಲಿ ಜೋಡುಕರೆ ಕಂಬಳ ಆಯೋಜನೆಯಾಗುವ ಮೂಲಕ ಮೊದಲ ಬಾರಿಗೆ ಈ ಭಾಗದ ಜನರಿಗೆ ಜೋಡುಕರೆ ಕಂಬಳ ನೋಡುವ ಭಾಗ್ಯ ದೊರೆಕಿದೆ ಎಂದರು.

ಮುಖಂಡ ಬಿ.ಎಂ. ಸುಕುಮಾರ ಶೆಟ್ಟಿ, ಉದ್ಯಮಿ ಗೋಕುಲ್ ಶೆಟ್ಟಿ ಉಪ್ಪುಂದ, ಜಿ.ಪಂ. ಮಾಜಿ ಸದಸ್ಯರಾದ ಇರ್ವತ್ತೂರು ಉದಯ ಎಸ್. ಕೋಟ್ಯಾನ್, ಸುಪ್ರೀತ್ ದೀಪಕ್ ಕುಮಾರ್ ಶೆಟ್ಟಿ, ಗೀತಾಂಜಲಿ ಸುವರ್ಣ, ತಾ.ಪಂ. ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಮಾಜಿ ಸದಸ್ಯರಾದ ಪ್ರದೀಪ್ ಕುಮಾರ ಶೆಟ್ಟಿ ಗುಡಿಬೆಟ್ಟು, ಬಾಬಣ್ಣ ಶೆಟ್ಟಿ, ಮರವಂತೆ– ಬಡಾಕೆರೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಗದೀಶ್ ಪೂಜಾರಿ ಹರ್ಕಾಡಿ, ವೀಣಾ ಶೆಟ್ಟಿ ಕಾಪು, ಜಿಲ್ಲಾ ಕಂಬಳ ತೀರ್ಮಾನಕಾರರ ಸಮಿತಿಯ ಸಂಚಾಲಕ ವಿಜಯ್ ಕುಮಾರ ಕಂಗಿನಮನೆ, ರವೀಂದ್ರ ಕಾರ್ಕಳ, ಬೆಂಗಳೂರಿನ ಉದ್ಯಮಿ ಅಶೋಕ್ ಕುಮಾರ್ ಶೆಟ್ಟಿ ಉಪ್ಪುಂದ, ಉದ್ಯಮಿ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಹರೀಶ್ ತೋಳಾರ್ ಕೊಲ್ಲೂರು, ಪ್ರಜ್ವಲ್ ಶೆಟ್ಟಿ ಕಾಲ್ತೋಡು, ಸುಜೇಂದ್ರ ಡಿ. ಶೆಟ್ಟಿ, ದೀಶನ್ ಡಿ. ಶೆಟ್ಟಿ, ನಿಕ್ಷಿತ್ ಶೆಟ್ಟಿ, ಪ್ರಕಾಶ್ ಪೂಜಾರಿ ನಂದನವನ, ಅನೂರ್ ಮೆಂಡನ್, ಅನೂಪ್ ದೇವಾಡಿಗ ಬೈಂದೂರು ಭಾಗವಹಿಸಿದ್ದರು.

ಬೈಂದೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಕೆ.ಸಿ. ನಿರೂಪಿಸಿದರು. 106 ಜೋಡಿ ಕೋಣಗಳು ಭಾಗಿಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.