ಕುಂದಾಪುರ: ಕಂಬಳ ಆಯೋಜನೆಯ ಹಿಂದಿನ ತಿಂಗಳುಗಳ ಕಾಲದ ಸಂಘಟಕರ ಶ್ರಮ ಹೊರ ಜಗತ್ತಿಗೆ ಕಾಣಿಸುವುದಿಲ್ಲ. ಕಂಬಳ ಪಾರಂಪರಿಕ ಉತ್ಸವ ಮಾತ್ರವಲ್ಲ, ಸಾಹಸಮಯ, ಅದ್ಭುತ ಕ್ರೀಡೆಗಳಲ್ಲಿ ಒಂದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಇಲ್ಲಿಗೆ ಸಮೀಪದ ಹೊಸಾಡು ಗ್ರಾಮ ಪಂಚಾಯಿತಿಯ ಮುಳ್ಳಿಕಟ್ಟೆಯ ‘ನಗು ಸಿಟಿ’ ಮೈದಾನದಲ್ಲಿ ಬೈಂದೂರು ತಾಲ್ಲೂಕು ರೈತ ಸಂಘದ ಆಶ್ರಯದಲ್ಲಿ ಏಪ್ರಿಲ್ನಲ್ಲಿ ನಡೆಯುವ ಜೋಡುಕರೆ ಕಂಬಳ ಸಹಿತ 5 ದಿನಗಳ ರೈತೋತ್ಸವ ಕಾರ್ಯಕ್ರಮಕ್ಕೆ ಬುಧವಾರ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಂಬಳದ ಯಶಸ್ಸು ಕೇವಲ ಪುರುಷರಿಗೆ ಮಾತ್ರವಲ್ಲ, ಕೋಣದ ಮನೆಯ ಯಜಮಾನರು, ಹೆಂಗಸರು, ಚಾಕರಿ ಮಾಡುವವರಿಗೂ ಸಲ್ಲಬೇಕು. ಕೃಷಿ ಚಟುವಟಿಕೆಗಳು ದೂರವಾಗುತ್ತಿರುವ ಕಾಲದಲ್ಲಿ ಕಂಬಳ ಕೋಣಗಳನ್ನು ಸಾಕುವ ಮೂಲಕ, ಜಾನುವಾರುಗಳ ವಂಶಾಭಿವೃದ್ಧಿಯ ಕೆಲಸ ನಡೆಯುತ್ತಿದೆ. ಬೈಂದೂರು ಭಾಗದ ಯುವ ಓಟಗಾರರು ಕಂಬಳದಲ್ಲಿ ಸಾಧನೆ ಮಾಡಿ ಹಿರಿಮೆ ಹೆಚ್ಚಿಸಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬೈಂದೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕುಂದಾಪುರ, ಬೈಂದೂರು ಭಾಗದಲ್ಲಿ ಇದೇ ಮೊದಲ ಬಾರಿಗೆ ಜೋಡುಕರೆ ಕಂಬಳದ ಆಯೋಜನೆ ಮಾಡಲಾಗುತ್ತಿದೆ. ಎಲ್ಲಾ ಧರ್ಮದ ಬಂಧುಗಳು ಭಾಗವಹಿಸುವ ನಿರೀಕ್ಷೆ ಇದೆ. ಪಕ್ಷಾತೀತವಾಗಿ ನಡೆಯುವ ಈ ಸಾಂಸ್ಕೃತಿಕ, ಪಾರಂಪರಿಕ ಉತ್ಸವದಲ್ಲಿ ನಾಡಿನ ಗಣ್ಯರನ್ನು ಭಾಗವಹಿಸಲು ವಿನಂತಿ ಮಾಡಲಾಗುವುದು ಎಂದರು.

ಹಿಂದೆಲ್ಲಾ ಕಂಬಳ ಎಂದರೆ ಕೃಷಿಕರು, ರೈತರ ಹಬ್ಬ ಎನ್ನುವ ಭಾವನೆಯಿತ್ತು. ಅದು ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಕಂಬಳ ಸೇರಿ ಐದು ದಿನ ವಿವಿಧ ಕ್ಷೇತ್ರಗಳ ಉತ್ಸವ, ವಾಣಿಜ್ಯ ಮೇಳ, ಅಮ್ಯೂಸ್ಮೆಂಟ್ ಪಾರ್ಕ್, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಜಿಲ್ಲಾ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಕೆ. ಗುಣಪಾಲ್ ಕಡಂಬ ಮಾತನಾಡಿ, ಸಾಂಪ್ರದಾಯಿಕತೆಯನ್ನು ಉಳಿಸಿಕೊಳ್ಳುವುದರ ಮೂಲಕ ವೈಜ್ಞಾನಿಕ ದೃಷ್ಟಿಕೋನ ಇರಿಸಿಕೊಂಡು ಕಂಬಳ ಪರಂಪರೆಯನ್ನು ಬೆಳೆಸುವ ಕುರಿತು ಸಮಿತಿ ನಿರಂತರವಾಗಿ ಆಲೋಚನೆ ಮಾಡುತ್ತಿದೆ. ಎಂಐಟಿ ಕಾಲೇಜಿನ ಸಹಕಾರದಲ್ಲಿ ಕೃತಕ ಬುದ್ಧಿಮತ್ತೆ ಬಳಸಿಕೊಂಡು ಕಂಬಳದ ಓಟ, ತೀರ್ಮಾನಗಳಲ್ಲಿನ ಕನಿಷ್ಠ ಲೋಪಗಳನ್ನು ಸರಿಪಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಕಂಬಳ ಆಯೋಜಕರು ನೀರು, ಗಾಳಿ, ಓಟದ ಟ್ರ್ಯಾಕ್ ನಿರ್ಮಾಣದ ಬಗ್ಗೆ ವಿಶೇಷ ಗಮನ ನೀಡಬೇಕು. ದೂರದ ಊರಿನಿಂದ ಬರುವ ಕಂಬಳದ ಕೋಣಗಳು, ಅವುಗಳೊಂದಿಗೆ ಬರುವವರನ್ನು ಗೌರವ, ಪ್ರೀತಿಯಿಂದ ಕಂಡು ಅಗತ್ಯ ಮೂಲಸೌಕರ್ಯ ನೀಡುವ ಬದ್ಧತೆ ಇರಿಸಿಕೊಳ್ಳಬೇಕು ಎಂದರು.

ಉದ್ಯಮಿ ಭೋಜರಾಜ್ ಶೆಟ್ಟಿ ಬೈಂದೂರು, ಜಿಲ್ಲಾ ಕಂಬಳ ಸಮಿತಿ ಗೌರವ ಸಲಹೆಗಾರ ಬಾರ್ಕೂರು ಶಾಂತಾರಾಮ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಇರ್ವತ್ತೂರು ಉದಯ್ ಕೋಟ್ಯಾನ್ ಮಾತನಾಡಿದರು.

ಜಿಲ್ಲಾ ಕಂಬಳ ತೀರ್ಮಾನಕರ ಸಮಿತಿ ಪ್ರಮುಖರಾದ ವಿಜಯ್ ಕುಮಾರ್ ಕಂಗಿನಮನೆ, ಗಿರೀಶ್ ಬೈಂದೂರು, ಚಂದ್ರಶೇಖರ ಪೂಜಾರಿ ಆರಾಟೆ, ಮಂಜುನಾಥ ಪೂಜಾರಿ ಸಸಿಹಿತ್ಲು, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಉದ್ಯಮಿ ಸುಧಾಕರ ಶೆಟ್ಟಿ ಅಲ್ಸಾಡಿ, ತಾ.ಪಂ. ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಮಾಜಿ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಕಡ್ಕೆ, ಮಾಜಿ ಸದಸ್ಯ ಸುರೇಂದ್ರ ಖಾರ್ವಿ ಗಂಗೊಳ್ಳಿ, ಪ್ರಮುಖರಾದ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಪ್ರಜ್ವಲ್ ಶೆಟ್ಟಿ ಕಾಲ್ತೋಡು, ಪ್ರಿಯದರ್ಶಿನಿ ಬೆಸ್ಕೂರು, ಚಿತ್ತರಂಜನ್ ಹೆಗ್ಡೆ ಕಟ್ಟಿನಮಕ್ಕಿ, ನಾಗರಾಜ್ ಶೆಟ್ಟಿ ನಾರ್ಕಳಿ, ನಿತಿನ್ ಖಾರ್ವಿ ಗಂಗೊಳ್ಳಿ, ಜಗದೀಶ್ ಪೂಜಾರಿ ಹರ್ಕಾಡಿ, ಶಿವರಾಜ್ ಶೆಟ್ಟಿ ಹುಂಚಣಿ, ಶ್ರೀಧರ ಬಿಜೂರು, ರಮೇಶ್ ಆಚಾರ್ಯ ಹೊಸಾಡು, ಸಂದೀಪ್ ಖಾರ್ವಿ ಗಂಗೊಳ್ಳಿ, ರಮೇಶ್ ಪೂಜಾರಿ ಯಳ್ಜಿತ್, ಜಗನ್ನಾಥ ಮೊಗವೀರ ಉಪ್ಪುಂದ, ಉಮೇಶ್ ಮೇಸ್ತಾ ಗುಜ್ಜಾಡಿ, ಹರೀಶ್ ಮೇಸ್ತಾ ಗುಜ್ಜಾಡಿ, ರಾಘವೇಂದ್ರ ಗುಜ್ಜಾಡಿ ಭಾಗವಹಿಸಿದ್ದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ಖಾರ್ವಿ ಉಪ್ಪುಂದ ನಿರೂಪಿಸಿದರು. ಸುಜೇಂದ್ರ ಡಿ. ಶೆಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.