ಉಡುಪಿ: ಒಡಿಶಾ, ಮಹಾರಾಷ್ಟ್ರ ಮೊದಲಾದೆಡೆ ಕಂಡು ಬರುವ ಲೆಸ್ಸರ್ ಫ್ಲೆಮಿಂಗೋ ಪಕ್ಷಿಯು(ರಾಜ ಹಂಸ ) ಮಲ್ಪೆಯ ಫಿಶ್ಮಿಲ್ ಬಳಿಯ ಸಣ್ಣ ನೀರಿನ ಕೊಳವೊಂದರಲ್ಲಿ ಕಂಡು ಬಂದಿದೆ.

ಉಡುಪಿಯ ಪಕ್ಷಿ ವೀಕ್ಷಕ ಮೋಹಿತ್ ಶೆಣೈ ಕೆ. ಅವರು ಮೊದಲು ಈ ಹಕ್ಕಿಯನ್ನು ಮಲ್ಪೆಯಲ್ಲಿ ಗುರುತಿಸಿದ್ದಾರೆ. ಫ್ಲೆಮಿಂಗೋ ಪಕ್ಷಿಗಳು ಸಾಮಾನ್ಯವಾಗಿ ಗುಂಪಾಗಿ ವಾಸಿಸುವ ಪಕ್ಷಿಗಳಾಗಿದ್ದು, ಮಲ್ಪೆಯಲ್ಲಿ ಈ ಪಕ್ಷಿ ಏಕಾಂಗಿಯಾಗಿ ಪತ್ತೆಯಾಗಿರುವುದು ಪಕ್ಷಿ ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಪಕ್ಷಿ ವೀಕ್ಷಕರಾದ ತೇಜಸ್ವಿ ಎಸ್. ಆಚಾರ್ಯ ಮತ್ತಿತರರೂ ಈ ಹಕ್ಕಿಯನ್ನು ವೀಕ್ಷಣೆ ಮಾಡಿದ್ದಾರೆ.

‘ಲೆಸ್ಸರ್ ಫ್ಲೆಮಿಂಗೋ ಪಕ್ಷಿ ಉಡುಪಿಯಲ್ಲಿ ಮೊದಲ ಬಾರಿ ಕಂಡು ಬಂದಿದೆ. ಈ ಹಕ್ಕಿ ಗಾಯಗೊಂಡು ಅಥವಾ ಬೇರೇನೋ ಕಾರಣಗಳಿಂದ ಗುಂಪಿನಿಂದ ಬೇರ್ಪಟ್ಟು ಇಲ್ಲಿಗೆ ಬಂದಿರುವ ಸಾಧ್ಯತೆ ಇದೆ. ಕೆಲವು ದಿನಗಳಿಂದೆ ಒಂದೇ ಸ್ಥಳದಲ್ಲಿ ಕಂಡು ಬರುತ್ತಿದೆ’ ಎಂದು ಮಣಿಪಾಲ ಬರ್ಡಿಂಗ್ ಆ್ಯಂಡ್ ಕನ್ಸರ್ವೇಶನ್ ಟ್ರಸ್ಟ್ನ ಟ್ರಸ್ಟಿ ತೇಜಸ್ವಿ ಎಸ್. ಆಚಾರ್ಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.