ಉಡುಪಿ: ಪರ್ಯಾಯ ಪುತ್ತಿಗೆಮಠ ಮತ್ತು ಶ್ರೀಕೃಷ್ಣಮಠಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಉಡುಪಿಗೆ ಬರಲಿದ್ದಾರೆ.

11.30ಕ್ಕೆ ಒಂದೂವರೆ ಕಿ.ಮೀ ರೋಡ್ ಶೋ ನಡೆಸಿದ ಬಳಿ ಶ್ರೀಕೃಷ್ಣಮಠಕ್ಕೆ ತೆರಳುವವರು. ನಂತರ ಅಲ್ಲಿ ನಡೆಯುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಭೇಟಿಯ ಕಾರಣ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಸುವರ್ಣ ತೀರ್ಥ ಮಂಟಪದ ಶಿಖರ ಪ್ರತಿಷ್ಠೆ : ಶ್ರೀ ಕೃಷ್ಣಮಠದಲ್ಲಿ ಮೋದಿ ಅವರು ಅನಾವರಣಗೊಳಿಸಲಿರುವ ಸುವರ್ಣ ತೀರ್ಥ ಮಂಟಪದ ಶಿಖರ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಗುರುವಾರ ನೆರವೇರಿತು.

ಸುವರ್ಣ ತೀರ್ಥ ಮಂಟಪದ ಶಿಖರ ಪ್ರತಿಷ್ಠೆ ನೆರವೇರಿಸಿದ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು ಕಲಶಾಭಿಷೇಕ ಮಾಡಿ, ಪೂಜೆ ಸಲ್ಲಿಸಿದರು.

ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರ ಸನ್ಯಾಸ ದೀಕ್ಷೆಯ ಸುವರ್ಣ ಮಹೋತ್ಸವದ ಅಂಗವಾಗಿ ಕೃಷ್ಣ ಮಠದ ಒಳಗಿನ ತೀರ್ಥಮಂಟಪವನ್ನು ಸುವರ್ಣ ತೀರ್ಥ ಮಂಟಪವನ್ನಾಗಿ ಮಾಡಲಾಗಿದೆ.

ರಾಮನಮೂರ್ತಿ ಅನಾವರಣ

ಕಾರವಾರ: ಸಮೀಪವಿರುವ ಗೋವಾ ರಾಜ್ಯಕ್ಕೆ ಸೇರಿದ ಕಾಣಕೋಣ ಬಳಿ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಆವರಣದಲ್ಲಿ ನಿರ್ಮಿಸಿರುವ 77 ಅಡಿ ಎತ್ತರದ ಶ್ರೀರಾಮನ ಕಂಚಿನ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಧ್ಯಾಹ್ನ 3.45ಕ್ಕೆ ಅನಾವರಣ ಮಾಡುವರು.

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿ ಭದ್ರತೆ ಮಾಡಲಾಗಿದೆ. ವಿಶೇಷ ಭದ್ರತಾ ಪಡೆಯೂ ಬೀಡುಬಿಟ್ಟಿದೆ.

‘ಸುಮಾರು ಒಂದೂವರೆ ಗಂಟೆ ನಡೆಯುವ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳುವರು. ಮೂರ್ತಿಯ ಜೊತೆಗೆ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ನ್ನು ಉದ್ಘಾಟಿಸುವರು’ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.

ನೆರವೇರಿದ ಪ್ರಾಣ ಪ್ರತಿಷ್ಠೆ: ಶ್ರೀರಾಮನ ಕಂಚಿನ ಮೂರ್ತಿಯ ಪ್ರಾಣ ಪ್ರತಿಷ್ಠೆ ಕಾರ್ಯ ಗುರುವಾರ ನೆರವೇರಿತು. ಮಠದ ಪೀಠಾಧಿಪತಿ ವಿದ್ಯಾಧೀಶ ತೀರ್ಥ ಸ್ವಾಮೀಜಿ ಪ್ರಾಣ ಪ್ರತಿಷ್ಠೆ ನೆರವೇರಿಸಿದರು. ಮಠ ಸ್ಥಾಪನೆಯಾಗಿ 550 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ 11ದಿನ ‘ಸಾರ್ಧ ಪಂಚಶತಮಾನೋತ್ಸವ’ ಆಚರಿಸಲಾಗುತ್ತಿದೆ.

ಪ್ರಧಾನಿ ಭೇಟಿ: ನಗರದೆಲ್ಲೆಡೆ ಬಿಗಿ ಭದ್ರತೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 28 ರಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುತ್ತಿರುವ ಕಾರಣ ನಗರದೆಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಮೋದಿ ಅವರು ತೆರಳಲಿರುವ ರಸ್ತೆಯಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆ ಗುರುವಾರ ರಿಹರ್ಸಲ್ ನಡೆಸಿವೆ. ಹಲವು ವಾಹನಗಳನ್ನು ಬಳಸಿ ರಿಹರ್ಸಲ್ ನಡೆಸಲಾಯಿತು.

ರಿಹರ್ಸಲ್ಗಾಗಿ ಆದಿ ಉಡುಪಿಯಿಂದ ಬನ್ನಂಜೆ , ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗದಲ್ಲಿ ಸಂಪೂರ್ಣ ವಾಹನ ಸಂಚಾರವನ್ನು ಕೆಲ ಸಮಯ ಸ್ಥಗಿತಗೊಳಿಸಲಾಗಿತ್ತು. ನಗರ ವ್ಯಾಪ್ತಿಯ ಎಲ್ಲೆಡೆ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಭದ್ರತೆಗೆ ವಿವಿಧ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ಮೂರು ಸಾವಿರ ಮಂದಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

‘ಪ್ರಧಾನಿ ಅವರು ಹೆಲಿಪ್ಯಾಡ್ನಲ್ಲಿ ಇಳಿದ ಬಳಿಕ ಬನ್ನಂಜೆ ವೃತ್ತದಿಂದ ಕಲ್ಸಂಕ ವೃತ್ತದ ವರೆಗೆ ರೋಡ್ ಶೋ ನಡೆಸಲಿದ್ದಾರೆ. ಅಲ್ಲಿಂದ ಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ ಮಾಡಿ, ಬಳಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು’ ಎಂದು ಹೇಳಿದರು.

‘ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಗಳು ಸೇರಿದಂತೆ 10 ಮಂದಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಭದ್ರತೆಯು ಎಸ್ಪಿಜಿ ನಿರ್ವಹಿಸುತ್ತಿದ್ದು, ಎನ್ಎಸ್ಜಿ, ಸಿಸಿಟಿ, ಐಎಸ್ಡಿ ಕೂಡ ಭದ್ರತೆ ಒದಗಿಸಲಿದೆ. ಎಡಿಜಿಪಿ ನೇತೃತ್ವದಲ್ಲಿ ಇಬ್ಬರು ಐಜಿಗಳು ಮೇಲ್ನೋಟ ವಹಿಸಲಿದ್ದಾರೆ’ ಎಂದರು.

40 ನಿಮಿಷ ಮುಂಚಿತ ಆಗಮನ: ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿತ ಸಮಯಕ್ಕಿಂತ 40 ನಿಮಿಷ ಮುಂಚಿತವಾಗಿ ಬರಲಿದ್ದಾರೆ ಎಂದು ಹರಿರಾಮ್ ಶಂಕರ್ ತಿಳಿಸಿದರು.

ಪ್ರಧಾನಿ ಅವರು ಬೆಳಿಗ್ಗೆ 11 ಗಂಟೆಗೆ ಆದಿ ಉಡುಪಿ ಹೆಲಿಪ್ಯಾಡ್ಗೆ ಬಂದು 11 ರಿಂದ 11.30ರ ವರೆಗೆ ರೋಡ್ ಶೋ ನಡೆಸುವರು. ಮಠದ ಕಾರ್ಯಕ್ರಮ ಮುಗಿಸಿ, ಮಧ್ಯಾಹ್ನ 1 ಗಂಟೆಗೆ ಹೊರಡಲಿದ್ದಾರೆ ಎಂದರು.

ಪ್ರಧಾನಿ ಸ್ವಾಗತಕ್ಕೆ ಸಿದ್ಧತೆ ಪೂರ್ಣ

ಪ್ರಧಾನಿ ಕಾರ್ಯಕ್ರಮಕ್ಕಾಗಿ ಗುರುವಾರ ಅಂತಿಮ ಹಂತದ ಸಿದ್ಧತೆಗಳು ನಡೆದವು. ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಸಭಾ ಕಾರ್ಯಕ್ರಮಕ್ಕಾಗಿ ನಿರ್ಮಿಸಿರುವ ಟೆಂಟ್ನಲ್ಲಿ ಆಸನಗಳನ್ನು ಅಳವಡಿಸುವ ಕಾರ್ಯವೂ ನಡೆಯಿತು. ಸಭಾ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರವೇಶಿಸುವಲ್ಲಿ ಮೆಟಲ್ ಡಿಟೆಕ್ಟರ್ಗಳನ್ನೂ ಅಳವಡಿಸಲಾಗಿದೆ. ಎಸ್ಪಿಜಿ ಅಧಿಕಾರಿಗಳು ಇಲ್ಲಿನ ಭದ್ರತೆಯನ್ನು ಪರಿಶೀಲಿಸಿದ್ದಾರೆ. ಕೃಷ್ಣ ಮಠದ ಸುತ್ತಮುತ್ತ ಅಲಂಕಾರಕ್ಕಾಗಿ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯವೂ ನಡೆಯಿತು. ಕಲ್ಸಂಕ ಸೇರಿದಂತೆ ವಿವಿಧೆಡೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರುವ ಬೃಹತ್ ಫ್ಲೆಕ್ಸ್ಗಳನ್ನು ಅಳವಡಿಸಲಾಗಿದೆ. ಹೆಲಿಪ್ಯಾಡ್ನಿಂದ ಪ್ರಧಾನಿಯವರು ಬರಲಿರುವ ಆದಿ ಉಡುಪಿ –ಕರಾವಳಿ ಬೈಪಾಸ್ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಯೂ ಪೂರ್ಣಗೊಂಡಿದೆ. ಈ ರಸ್ತೆಯ ಇಕ್ಕೆಲಗಳಲ್ಲೂ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ.

ಸಾರ್ವಜನಿಕರಿಗೆ ಪೊಲೀಸರ ಸಲಹೆ

ಪ್ರಧಾನಿ ರೋಡ್ ಶೋ ಕಾರ್ಯಕ್ರಮಕ್ಕೆ ಬರುವವರು ಬೆಳಿಗ್ಗೆ 10.30ರ ಒಳಗಾಗಿ ನಿಗದಿತ ಸ್ಥಳಕ್ಕೆ ಬರಬೇಕು ತಡವಾಗಿ ಬಂದವರನ್ನು ನಿರ್ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ. ರೋಡ್ ಶೋ ಮಾರ್ಗದ ಎರಡೂ ಬದಿಯ ಪೊಲೀಸ್ ಬ್ಯಾರಿಕೇಡ್ ದಾಟಬಾರದು. ರೋಡ್ ಶೋ ಮಾರ್ಗದಲ್ಲಿ ನೀರಿನ ಬಾಟಲಿ ಬ್ಯಾಗ್ ಹೂವಿನ ಬೊಕ್ಕೆ ನೆನಪಿನ ಕಾಣಿಕೆ ಕ್ಯಾಮೆರಾ ಡ್ರೋನ್ ಲೇಸರ್ ಲೈಟ್ ಧ್ವಜದ ಕಂಬಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ. ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಪೊಲೀಸ್ ಪರಿಶೀಲನೆಗೆ ಒಳಗಾಗಬೇಕು. ರೋಡ್ ಶೋ ಮಾರ್ಗದ ಯಾವುದೇ ಕಟ್ಟಡಗಳ ಮೇಲೆ ಹತ್ತಬಾರದು ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.