ಬೈಂದೂರು: ಸುರಭಿ ಬೈಂದೂರು ಸಂಸ್ಥೆಯ ಬೆಳ್ಳಿಹಬ್ಬದ ಪ್ರಯುಕ್ತ ಡಿ. 14ರಿಂದ 21ರವರೆಗೆ ರಾಜ್ಯಮಟ್ಟದ ನಾಟಕ ಸ್ಪರ್ಧೆ ಯಡ್ತರೆ ಜಿ.ಎನ್.ಆರ್. ಕಲಾಮಂದಿರದ ಹೊರಾಂಗಣ ಸಭಾ ವೇದಿಕೆಯಲ್ಲಿ ಸಂಜೆ 7ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಆನಂದ ಮದ್ದೋಡಿ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 14ರಂದು ಶಾಸಕ ಗುರುರಾಜ ಗಂಟಿಹೊಳೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಪ್ಪುಂದ ವರಲಕ್ಷ್ಮೀ ಚಾರಿಟಬಲ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ನಾಟಕ ಸ್ಪರ್ಧೆಗೆ ಚಾಲನೆ ನೀಡುವರು. ರಂಗಾಯಣ ಟ್ರಸ್ಟ್ ಮೈಸೂರು ತಂಡದಿಂದ ‘ಚಾಮಚೆಲುವೆ’ ನಾಟಕ ಪ್ರದರ್ಶನಗೊಳ್ಳಲಿದೆ.

15ರಂದು ಕಲಾರೋಹಣ ಶಿವಮೊಗ್ಗ ತಂಡದಿಂದ ‘ನನ… ನನಂ ರಸ್ತೆ’ ನಾಟಕ, 16ರಂದು ಸುಮನಸ ಕೊಡವೂರು ಉಡುಪಿ ತಂಡದಿಂದ ‘ಈದಿ’ ನಾಟಕ. 17ರಂದು ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ ಬೆಂಗಳೂರು ತಂಡದ ‘ಮಾರಿಕಾಡು’, 18ರಂದು ಸಹ್ಯಾದ್ರಿ ರಂಗತಂಡ ಶಿವಮೊಗ್ಗ ತಂಡದ ‘ರಾವಿ ನದಿಯ ದಂಡೆಯಲ್ಲಿ’, 19ರಂದು ಸ್ಪಂದನ ಸಾಗರ ತಂಡದ ‘ಪ್ರಾಣ ಪದ್ಮನಿ’ ಪ್ರದರ್ಶನಗೊಳ್ಳಲಿದೆ. 20ರಂದು ಕ್ರಾನಿಕಲ್ಸ್ ಆಫ್ ಇಂಡಿಯಾ ಬೆಂಗಳೂರು ತಂಡ ‘ಶಿವೋಹಂ’, 21ರಂದು ನಮ್ಮ ನಟನೆ ಬೆಂಗಳೂರು ತಂಡದವರು ‘ಮಗಳೆಂಬ ಮಲ್ಲಿಗೆ’ ನಾಟಕ ಪ್ರಸ್ತುತಿಪಡಿಸುವರು ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ, ಉಪಾಧ್ಯಕ್ಷರಾದ ಲಕ್ಷ್ಮಣ ಕೊರಗ ಬೈಂದೂರು, ಸುರೇಶ್ ಹುದಾರ್ ಯಡ್ತರೆ, ಸಂಘಟನಾ ಕಾರ್ಯದರ್ಶಿ ವೆಂಕಟರಮಣ ಜಿ. ಮಯ್ಯಾಡಿ, ಕಾರ್ಯಕಾರಿ ಸಮಿತಿ ಸದಸ್ಯ ವಾಸುದೇವ ಪಡುವರಿ ಭಾಗವಹಿಸಿದ್ದರು. ನಿರ್ದೇಶಕ ಸುಧಾಕರ ಪಿ. ಬೈಂದೂರು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.