ಶನಿವಾರ, ಜುಲೈ 31, 2021
24 °C

ನೃತ್ಯ ಮಾಡಿ ಪತ್ನಿಗೆ ಧೈರ್ಯತುಂಬಿದ ಸೋಂಕಿತ ಪತಿ: ವಿಡಿಯೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕೋವಿಡ್ ಸೋಂಕು ತಗುಲಿ ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬ್ರಹ್ಮಾವರ ತಾಲ್ಲೂಕಿನ ಕೋಟದ ಹೋಟೆಲ್‌ ಮಾಲೀಕರೊಬ್ಬರು ಪತ್ನಿಗೆ ವಿಡಿಯೋಕಾಲ್‌ನಲ್ಲಿ ನೃತ್ಯ ಮಾಡಿ ಧೈರ್ಯ ತುಂಬಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ.

ಡಾ.ರಾಜ್‌ಕುಮಾರ್ ನಟನೆಯ ಹಾಡಿಗೆ ಉದ್ಯಮಿ ಹೆಜ್ಜೆಹಾಕಿದ್ದು, ವಿಡಿಯೋವನ್ನು ಹಲವರು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಕೊರೊನಾ ಸೋಂಕಿನ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವಿಡಿಯೋವೊಂದನ್ನೂ ಮಾಡಿ ಗಮನ ಸೆಳೆದಿದ್ದಾರೆ.

'ಜುಲೈ 1ರಂದು ನನಗೆ ಕೋವಿಡ್ ಸೋಂಕು ತಗುಲಿರುವುದು ತಿಳಿಯಿತು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದು, ಒಂದು ವಾರ ಕಳೆದಿದೆ. ಆಸ್ಪತ್ರೆಯಲ್ಲಿ ಯಾವ ಸಮಸ್ಯೆ ಇಲ್ಲ. ಕೊರೊನಾ ಸೋಂಕಿನ ಬಗ್ಗೆ ಸಾರ್ವಜನಿಕರು ಭಯಪಡಬೇಕಿಲ್ಲ, ಸೋಂಕಿತರಿಗೆ ಆಪರೇಷನ್ ಮಾಡುವುದಿಲ್ಲ. ಧೈರ್ಯದಿಂದ ಇದ್ದರೆ ರೋಗ ಗುಣಮುಖವಾಗುತ್ತದೆ. ಕೊರೊನಾ ಸೋಂಕು ತಗುಲುವುದು ಸಾಮಾನ್ಯ ಎಂದು ಅನುಭವ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು