ಬುಧವಾರ, ಆಗಸ್ಟ್ 17, 2022
28 °C

ಅಮೆರಿಕದಲ್ಲಿ ಲಸಿಕೆ ಪಡೆದ ಶಿರಾ ಮೂಲದ ವೈದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ಅಮೆರಿಕದಲ್ಲಿ ನೆಲೆಸಿರುವ ಶಿರಾ ಮೂಲದ ಡಾ.ಅರುಣ್ ರಂಗನಾಥ್ ಅವರು ಬುಧವಾರ ಮೊದಲ ಹಂತದ ಕೋವಿಡ್‌–19 ಲಸಿಕೆ ಪಡೆದಿದ್ದಾರೆ.

ಫೈಜರ್‌ ಅಭಿವೃದ್ಧಿಪಡಿಸಿರುವ ಲಸಿಕೆ ಯನ್ನು ಬುಧವಾರದಿಂದ ಕೊರೊನಾ ವಾರಿಯರ್ಸ್‌ಗೆ ನೀಡಲಾಗುತ್ತಿದೆ. ಕೊರೊನಾ ವಾರಿಯರ್‌ ಆಗಿರುವ ಅರುಣ್ ಮೊದಲಿಗರಾಗಿ ಈ ಲಸಿಕೆ ಪಡೆದಿದ್ದಾರೆ. 

ಜಾರ್ಜಿಯಾದಲ್ಲಿ ನೆಲೆಸಿರುವ ಅವರು ಶ್ವಾಸಕೋಶ, ಔಷಧ ಮತ್ತು ತುರ್ತು ಚಿಕಿತ್ಸಾ ತಜ್ಞರಾಗಿದ್ದಾರೆ. ಆಲ್ ಪಾಂಡ್ ಸೆಂಟರ್ ಫಾರ್ ಹೆಲ್ತ್ ಸಂಸ್ಥೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಗುರುವಾರ ‘ಪ್ರಜಾವಾಣಿ’ ಯೊಂದಿಗೆ ದೂರವಾಣಿಯಲ್ಲಿ ಮಾತ ನಾಡಿದ ಅವರು, ‘ಕೋವಿಡ್ ಲಸಿಕೆ ನೋವು ರಹಿತವಾಗಿದ್ದು, ತ್ವರಿತವಾಗಿ ಕೆಲಸ ಮಾಡುತ್ತದೆ. ಜೊತೆಗೆ ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲ. ಜನರು ಆತಂಕ ಪಡುವುದು ಬೇಡ. ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಸಹ ಲಸಿಕೆ ದೊರೆಯಲಿದೆ’ ಎಂದರು.

ಮೊದಲ ‌ಹಂತದಲ್ಲಿ ಫೈಜರ್‌ ಕಂಪನಿಯ ಕೋವಿಡ್– 19 ಲಸಿಕೆ 0.3 ಸಿ.ಸಿ ಮೊದಲ ಡೋಸ್‌ ನೀಡಲಾಗಿದೆ. ಮೂರು ವಾರಗಳ ನಂತರ ಮತ್ತೆ ಎರಡನೇ ಡೋಸ್‌ ತೆಗೆದುಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.

ಶಿರಾ ನಿವಾಸಿ ರಂಗನಾಥ್ ಅವರ ಪುತ್ರರಾದ ಅರುಣ್,‌ ಸ್ಥಳೀಯ ಸೆಂಟ್ ಅನ್ಸ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ತುಮಕೂರಿನ ಸರ್ವೋದಯ ಕಾಲೇಜಿನಲ್ಲಿ ಪಿಯುಸಿ ಓದಿದ್ದಾರೆ. ವೈದ್ಯಕೀಯ ಶಿಕ್ಷಣದ ನಂತರ ಅಮೆರಿಕದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು