ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಐದು ದಿನದಲ್ಲಿ ಎರಡನೇ ಡಾಲ್ಫಿನ್ ಕಳೇಬರ ಪತ್ತೆ

Last Updated 17 ಮಾರ್ಚ್ 2021, 16:12 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ಬಾಡ ಕಡಲ ತೀರದಲ್ಲಿ ‘ಇಂಡೋ ಫೆಸಿಫಿಕ್ ಹಂಪ್ ಬ್ಯಾಕ್’ ಜಾತಿಯ ಮತ್ತೊಂದು ಡಾಲ್ಫಿನ್‍ನ ಕಳೇಬರ ಬುಧವಾರ ಕಂಡು ಬಂದಿದೆ. ಇದೇ ಜಾಗದಲ್ಲಿ ಮಾರ್ಚ್ 12ರಂದು ಕೂಡ ಡಾಲ್ಫಿನ್‌ನ ಮೃತದೇಹ ಪತ್ತೆಯಾಗಿತ್ತು.

‘ಈ ಡಾಲ್ಫಿನ್ ಮೃತಪಟ್ಟು ಆರು ದಿನಗಳಾಗಿವೆ. ಸುಮಾರು 2.25 ಮೀಟರ್ ಉದ್ದವಿದೆ. ಈಚೆಗೆ ಸಿಕ್ಕಿದ್ದ ಡಾಲ್ಫಿನ್ ಕಳೇಬರವೂ ಸುಮಾರು 2.55 ಮೀಟರ್ ಉದ್ದವಿತ್ತು’ ಎಂದು ಕುಮಟಾ ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ ತಿಳಿಸಿದರು.

‘ಡಾಲ್ಫಿನ್‍ನ ಬಾಲದ ಭಾಗದಲ್ಲಿ ಆಳವಾದ ಗಾಯ ಕಂಡುಬಂದಿದೆ. ಸಮುದ್ರದಲ್ಲಿ ಓಡಾಡುವಾಗ ಮೀನುಗಾರಿಕಾ ದೋಣಿಗಳಿಗೆ ಅಳವಡಿಸಿದ್ದ ಎಂಜಿನ್‌ನ ಫ್ಯಾನ್ ತಗುಲಿರಬಹುದು. ಡಾಲ್ಫಿನ್‌ಗಳು ಮೀನುಗಳನ್ನು ಬೇಟೆಯಾಡುವಾಗ ನೀರಿನ ಅಲೆಯ ಜೊತೆ ವೇಗವಾಗಿ ದಡದ ಕಡೆ ಬಂದು ಮೃತಪಟ್ಟಿರುವ ಸಾಧ್ಯತೆಯೂ ಇದೆ. ಎಷ್ಟೋ ಸಲ ಎರಡೂ ಬದಿ ಹರಿತ ಮುಳ್ಳುಗಳಿರುವ ಮೀನುಗಳನ್ನು ಬೇಟೆಯಾಡಿ ತಿಂದ ಡಾಲ್ಫಿನ್ ಹೊಟ್ಟೆಯನ್ನು ಆ ಮೀನಿನ ಮುಳ್ಳು ಘಾಸಿಗೊಳಿಸಿದ ಪ್ರಕರಣಗಳೂ ಇವೆ. ಹೆಚ್ಚಿನ ಮಾಹಿತಿ ಪಡೆಯಲು ಡಾಲ್ಫಿನ್ ಚಿತ್ರಗಳನ್ನು ಕಾರವಾರದ ಕಡಲ ಜೀವಿ ಅಧ್ಯಯನ ಕೇಂದ್ರಕ್ಕೆ ಕಳುಹಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT