ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣ: ಕಡಲಾಮೆಯ ಮೃತದೇಹ ಪತ್ತೆ

Last Updated 9 ಅಕ್ಟೋಬರ್ 2021, 15:24 IST
ಅಕ್ಷರ ಗಾತ್ರ

ಗೋಕರ್ಣ: ಇಲ್ಲಿನ ಮೇನ್ ಬೀಚಿನ ದಡದಲ್ಲಿ ಶನಿವಾರಕಡಲಾಮೆಯ ಮೃತದೇಹ ಪತ್ತೆಯಾಗಿದೆ. ಅದು ಮೃತಪಟ್ಟು ಎರಡು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಬಿಸಿಲಿಗೆ ಅದರ ಚಿಪ್ಪಿನ ಮೇಲೆ ಬಿರುಕು ಬಿಟ್ಟಿದೆ. ಮೀನುಗಾರರ ಬಲೆಗೆ ಸಿಲುಕಿ ಮೃತಪಟ್ಟಿರುವ ಸಾಧ್ಯತೆಯೂ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಮೆಯ ಮೃತದೇಹ ಪತ್ತೆಯಾದ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಯಿತು ಎಂದು ಲೈಫ್ ಗಾರ್ಡ್ ಮೇಲ್ವಿಚಾರಕ ರವಿ ನಾಯ್ಕ ತಿಳಿಸಿದ್ದಾರೆ.

ಉತ್ತರ ಕನ್ನಡದ ಸಮುದ್ರ ತೀರದಲ್ಲಿ ಎರಡು ತಿಂಗಳಿನಿಂದ ಹಲವು ಕಡಲಾಮೆಗಳು ಹಾಗೂ ತಿಮಿಂಗಿಲಗಳ ಕಳೇಬರಗಳು ಪತ್ತೆಯಾಗುತ್ತಿವೆ. ಮೀನುಗಾರರ ಬಲೆಗಳಿಗೆ ಸಿಲುಕಿ ಹೊರ ಬರಲಾರದೇ ಸಾಯುತ್ತಿವೆಯೇ ಅಥವಾ ಸಮುದ್ರದ ನೀರಿನಲ್ಲಿ ವ್ಯತ್ಯಾಸವಾಗಿದೆಯೇ ಎಂದು ಅಧ್ಯಯನ ಮಾಡಬೇಕು. ಜಲಚರಗಳ ಅಸಹಜ ಸಾವನ್ನು ನಿಯಂತ್ರಿಸಬೇಕು ಎಂದು ವನ್ಯಜೀವಿ ಪ್ರಿಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT