ಉತ್ತರ ಕನ್ನಡ: ನಿರಂತರ ಮಳೆ, ಗುಡ್ಡೇಬಾಳ ಕ್ರಾಸ್ನಲ್ಲಿ ಗುಡ್ಡ ಕುಸಿತ

ಕಾರವಾರ: ಹೊನ್ನಾವರ ತಾಲ್ಲೂಕಿನ ಗುಡ್ಡೇಬಾಳ ಕ್ರಾಸ್ನಲ್ಲಿ ಗುರುವಾರ ಹೆದ್ದಾರಿಯ ಒಂದ ಭಾಗದ ಮೇಲೆ ಗುಡ್ಡ ಕುಸಿತವಾಗಿದೆ. ಚಿರೆಕಲ್ಲಿನ ಬಂಡೆ ಮತ್ತು ಮಣ್ಣು ಬಿದ್ದಿದ್ದು, ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.
ಹೊನ್ನಾವರ- ಗೇರುಸೊಪ್ಪ ನಡುವೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಕರಾವಳಿಯಲ್ಲಿ ಗುರುವಾರವೂ ಮಳೆ ಜೋರಾಗಿ ಸುರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಿದೆ. ಮುಂದಿನ ಮೂರು ದಿನ ಜೋರಾಗಿ ವರ್ಷಧಾರೆಯಾಗುವ ಸಾಧ್ಯತೆಯಿದೆ. ಭಾರಿ ಗಾತ್ರದ ಅಲೆಗಳು ಏಳುತ್ತಿದ್ದು, ಮೀನುಗಾರರು ಮತ್ತು ಸಾರ್ವಜನಿಕರು ಸಮುದ್ರಕ್ಕೆ ಇಳಿಯಬಾರದು ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಮಿತಿ ಸೂಚಿಸಿದೆ.
ಘಟ್ಟ ಪ್ರದೇಶದಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳಿಗೆ ಒಳಹರಿವು ಹೆಚ್ಚಿದೆ. ಸೂಪಾ ಜಲಾಶಯದ ಮೇಲ್ಭಾಗದಲ್ಲಿರುವ ಅಪ್ಪರ್ ಕಾನೇರಿ ಜಲಾಶಯದಿಂದ ಕಾಳಿ ನದಿಗೆ ನೀರು ಹರಿಸಲಾಗಿದೆ. ಹಾಗಾಗಿ ಕೆಳಭಾಗದ ಕೆಲವು ಸೇತುವೆಗಳು ಜಲಾವೃತವಾಗಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.