‘ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಲಿ’
‘ಸ್ವಂತ ಕಟ್ಟಡಗಳಲ್ಲಿ ಅಂಗನವಾಡಿ ನಡೆಸಲು ನಿವೇಶನವೇ ದೊಡ್ಡ ತಲೆನೋವಾಗಿದ್ದರಿಂದ ಶಾಲಾ ಕೊಠಡಿ ಸಭಾಭವನದಂಥ ಕಟ್ಟಡದಲ್ಲಿ ಕಲಿಯುವ ಮಕ್ಕಳಿಗೆ ಸೂಕ್ತ ಸೌಲಭ್ಯವೂ ಸಿಗುತ್ತಿಲ್ಲ. ದಶಕದಿಂದ ಒಂದೇ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿರುವ ಕೆಲ ಅಂಗನವಾಡಿಗಳು ಸುಣ್ಣ–ಬಣ್ಣದ ಭಾಗ್ಯವನ್ನೂ ಕಂಡಿಲ್ಲ. ಹೀಗಾಗಿ ಎಷ್ಟೋ ಕೇಂದ್ರಗಳು ಮಳೆಗಾಲದಲ್ಲಿ ಸೋರುತ್ತಿವೆ. ಕೆಲವೆಡೆ ನೀರಿಗೆ ನಲ್ಲಿ ಸಂಪರ್ಕ ಇಲ್ಲ. ಕೆಲವೆಡೆ ಮಕ್ಕಳಿಗೆ ಬಾಣಂತಿಯರಿಗೆ ಶುದ್ಧ ನೀರು ಸಿಗುತ್ತಿಲ್ಲ. ಶೌಚಾಲಯ ವ್ಯವಸ್ಥೆಯೂ ಅಷ್ಟಕಷ್ಟೇ ಎಂಬಂತಾಗಿದೆ. ತಕ್ಷಣ ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಿ ಅನುಮತಿ ನೀಡಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಬೇಕು’ ಎಂಬುದು ಪಾಲಕರಾದ ಸುಬ್ರಾಯ ಹೆಗಡೆ ಸೋಮಶೇಖರ ನಾಯ್ಕ ಇನ್ನಿತರರ ಆಗ್ರಹವಾಗಿದೆ.