ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ: ಮಾಂಸದೂಟ ಸೇವಿಸಿ ನಾಗಬನಕ್ಕೆ ಭೇಟಿ ನೀಡಿದ ಸಿ.ಟಿ.ರವಿ, ವ್ಯಾಪಕ ಆಕ್ರೋಶ

Last Updated 22 ಫೆಬ್ರವರಿ 2023, 8:33 IST
ಅಕ್ಷರ ಗಾತ್ರ

ಭಟ್ಕಳ: ಫೆ.19ರಂದು ಪಟ್ಟಣಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಭಟ್ಕಳ ಶಾಸಕ ಸುನೀಲ ನಾಯ್ಕ ಅವರ ಮನೆಯಲ್ಲಿ ಮಾಂಸದೂಟ ಸೇವಿಸಿ ಸಂಜೆ ಪಟ್ಟಣದಲ್ಲಿ ಪುನರ್ ಸ್ಥಾಪಿಸಿದ ರಾಜಾಂಗಣ ನಾಗಬನಕ್ಕೆ ಭೇಟಿ ನೀಡಿ ನಾಗದೇವರ ದರ್ಶನ ಪಡೆದ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸದೂಟ ಮಾಡಿ ಧರ್ಮಸ್ಥಳ ದರ್ಶನ ಮಾಡಿರುವ ದೃಶ್ಯ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಈಡಾಗಿತ್ತು. ಸಿದ್ದರಾಮಯ್ಯ ಆಸ್ತಿಕರ ಟೇಕೆಗೆ ಗುರಿಯಾಗಿದ್ದರು. ಸಿ.ಟಿ.ರವಿ ಸೇರಿದಂತೆ ಬಿಜೆಪಿಯ ನಾಯಕರು ಸಿದ್ದರಾಮಯ್ಯ ಅವರನ್ನು ಇದೇ ವಿಚಾರವಾಗಿ ವ್ಯಾಪಕವಾಗಿ ಟೀಕಿಸಿದ್ದರು.

ಈಗ ಅಂತದ್ದೇ ಸ್ಥಿತಿಗೆ ಸಿ.ಟಿ.ರವಿ ಒಳಗಾಗಿದ್ದಾರೆ. ಶಿರಾಲಿಯಲ್ಲಿರುವ ಶಾಸಕ ಸುನೀಲ ನಾಯ್ಕರ ಮನೆಯಲ್ಲಿ ಮಾಂಸದೂಟ ಮಾಡಿ ಸಂಜೆ ರಾಜಾಂಗಣ ನಾಗಬನ ದರ್ಶನ ಮಾಡಿರುವು ಸ್ಥಳೀಯ ಆಸ್ತಿಕರು ಸಾಮಾಜಿಕ ಜಾಲಾತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಘಟ‌ನೆ ಸಂಬಂಧ ಪ್ರತಿಕ್ರಿಯೆ ಪಡೆಯಲು ಶಾಸಕ ಸುನೀಲ ನಾಯ್ಕ ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು ಕರೆ ಸ್ವೀಕರಿಸಲಿಲ್ಲ.

ಓದಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT