ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಶಿಕ್ಷಕರಿಗೆ ಗಣಿತ ಆಕೃತಿ ರಚನೆ ಕಾರ್ಯಾಗಾರ

Published 23 ಡಿಸೆಂಬರ್ 2023, 5:21 IST
Last Updated 23 ಡಿಸೆಂಬರ್ 2023, 5:21 IST
ಅಕ್ಷರ ಗಾತ್ರ

ಕಾರವಾರ: ಗಣಿತ ವಿಷಯವನ್ನು ಸರಳವಾಗಿ ಕಲಿಸುವ ನಿಟ್ಟಿನಲ್ಲಿ ಹೊಸ ಮಾದರಿಯ ಗಣಿತ ಸಂಬಂಧಿತ ಆಕೃತಿ ರಚಿಸುವ ತರಬೇತಿ ಕಾರ್ಯಾಗಾರ ಇಲ್ಲಿನ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ನಡೆಯಿತು.

ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ 30ಕ್ಕೂ ಹೆಚ್ಚು ಗಣಿತ ಶಿಕ್ಷಕರು ಪಾಲ್ಗೊಂಡಿದ್ದು, ಹಲವು ಬಗೆಯ ಗಣಿತ ಮಾದರಿಗಳನ್ನು ಸಿದ್ಧಪಡಿಸುವ ಕುರಿತು ತರಬೇತಿ ಪಡೆದರು.

ಗಣಿತ ಮತ್ತು ವಿಜ್ಞಾನ ವಿಷಯದ ಸಲಹೆಗಾರರಾದ ಮೀರಾ ರಾಘವನ್ ಆನ್‍ಲೈನ್ ಮೂಲಕ ಕಾರ್ಯಾಗಾರದಲ್ಲಿ ಪಾಲ್ಗೊಂಡು ಕಾಗದಗಳನ್ನು ಬಳಸಿ ಹಲವಾರು ಗಣಿತ ಚಟುವಟಿಕೆಗಳನ್ನು, ವಿವಿಧ ಗಣಿತದ ಆಕೃತಿಗಳನ್ನು ಜೋಡಿಸಿ ಹೊಸದಾದ ಆಕೃತಿಗಳನ್ನು ತಯಾರಿಸುವ ಬಗೆಯನ್ನು ವಿವರಿಸಿದರು. ಮೋಜಿನ ಗಣಿತವನ್ನು ವಿದ್ಯಾರ್ಥಿಗಳಿಗೆ ಕಲಿಸುವ ಕುರಿತು ಸಲಹೆ ನೀಡಿದರು.

ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ಸಂಜೀವ ದೇಶಪಾಂಡೆ, ಕವಿತಾ ಬಾಡಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT