ಕುಮಟಾ: ಅಲ್ಪಸಂಖ್ಯಾತರ ನಿಗಮ ವತಿಯಿಂದ ಪಟ್ಟಣದ ಬಾಗ್ವತ ಪೆಟ್ರೋಲ್ ಬಂಕ್ ಎದುರು ₹ 75 ಲಕ್ಷ ಮೊತ್ತದಲ್ಲಿ ನಿರ್ಮಿಸಿದ ಪಿಕ್ ಅಪ್ ಬಸ್ ನಿಲ್ದಾಣ-ವನ್ನಳ್ಳಿಯ 420 ಮೀಟರ್ ಸಿಮೆಂಟ್ ರಸ್ತೆಯ ಮೇಲ್ಮೆ ಒಂದೇ ತಿಂಗಳಲ್ಲಿ ಕಿತ್ತು ಹೋಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

`ಸಿಮೆಂಟ್ ರಸ್ತೆಯ ಗುಣಮಟ್ಟ ಕಳಪೆಯಾಗಿದ್ದು, ಅದರ ಮೇಲ್ಮೆ ಸಿಮೆಂಟ್ ಪದರ ಎದ್ದು ಹೋಗಿ ಒಳಗಿರುವ ಜಲ್ಲಿ ಹೊರಗೆ ಕಾಣುತ್ತಿದೆ. ಮಳೆ ನಿಂತಾಗ ವಾಹನ ಓಡಾಡಿದರೆ ಸಿಮೆಂಟ್ ಧೂಳು ಏಳುತ್ತದೆ. ಗುತ್ತಿಗೆದಾರರಿಗೆ ಇನ್ನೂ ಕಾಮಗಾರಿ ಹಣ ಪಾವತಿಯಾಗಿಲ್ಲ. ಅವರಿಗೆ ರಸ್ತೆ ಹಾಳಾಗಿರುವ ವಿಷಯ ತಿಳಿಸಿ ದುರಸ್ತಿ ಮಾಡಿಕೊಡುವಂತೆ ಸೂಚಿಸಿದ್ದೇನೆ' ಎಂದರು.

`ಅಲ್ಪಸಂಖ್ಯಾತರ ನಿಗಮದಿಂದ ಮಂಜೂರಾದ ರಸ್ತೆ ಕಾಮಗಾರಿಯನ್ನು ಮಾಲತೇಶ ಕನ್ಸ್ಟ್ರಕ್ಷನ್ ಕಂಪನಿ ನಿರ್ವಹಿಸಿತ್ತು. ರಸ್ತೆ ಕಾಮಗಾರಿ ಮಂಜೂರಾದಾಗ ಮಳೆ ಆರಂಭವಾಗಿದ್ದು, ರಸ್ತೆ ದುರಸ್ತಿಗಾಗಿ ಸಾರ್ವಜನಿಕರು ಪ್ರತಿಭಟನೆ ಸಹ ಕೈಕೊಂಡಿದ್ದರು. ಜನಪ್ರತಿನಿಧಿಗಳ ಹಾಗೂ ಸ್ಥಳೀಯರ ಒತ್ತಾಯದಿಂದಾಗಿ ತಕ್ಷಣ ಕಾಮಗಾರಿ ಆರಂಭಿಸಬೇಕಾಗಿ ಬಂದಿತು' ಎಂದು ಮಾಲತೇಶ ಕನ್ಸ್ಟ್ರಕ್ಷನ್ ಕಂಪನಿಯ ಸೂಪರವೈಸರ್ ಗಣಪತಿ ಮರಾಠೆ ಎನ್ನುವವರು ಮಾಹಿತಿ ನೀಡಿದರು.

`ರಸ್ತೆಗೆ ಸಿಮೆಂಟ್ ಕಾಂಕ್ರೀಟ್ ಹಾಕಿದ ನಂತರ ಅದು ಒಣಗಲು ಕೆಲ ದಿನ ಕಾಲಾವಕಾಶ ಬೇಕಾಗಿತ್ತು. ಆದರೆ ಸಾರ್ವಜನಿಕರು ರಸ್ತೆಯ ಮೇಲೆ ಓಡಾಡದಂತೆ ನಾವು ಅಳವಡಿಸಿದ್ದ ಪೊಲೀಸ್ ಬ್ಯಾರಿಕೇಡ್ ಅನ್ನು ತೆಗೆದು ಹಾಕಿ ರಸ್ತೆ ಮೇಲೆ ವಾಹನ ಚಲಾಯಿಸತೊಡಗಿದರು. ಈ ಸಂದರ್ಭದಲ್ಲಿ ಮಳೆ ಕೂಡ ಇದ್ದಿದ್ದರಿಂದ ರಸ್ತೆಯ ಮೇಲ್ಮೆಗೆ ಕೊಂಚ ಹಾನಿಯಾಗಿದೆ. ಆದರೆ ಅದರ ಮೇಲೆ ಸಿಮೆಂಟ್ ಹಾಕಿ ದುರಸ್ತಿ ಮಾಡಬಹುದಾಗಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.