ಕಾರವಾರ/ಸಿದ್ದಾಪುರ: ‘ಆರ್ಸಿಬಿ ತಂಡದ ಅಪ್ಪಟ ಅಭಿಯಾನಿಯಾಗಿದ್ದ ಪತ್ನಿಯ ಜೊತೆ ತಂಡದ ಸಂಭ್ರಮಾಚರಣೆ ಕಣ್ತುಂಬಿಕೊಳ್ಳಲು ಅರ್ಧ ದಿನ ಕೆಲಸಕ್ಕೆ ರಜೆ ಹಾಕಿ ಕ್ರೀಡಾಂಗಣದ ಬಳಿ ತೆರಳಿದ್ದೆವು. ಸಂಭ್ರಮದ ನೆಪದಲ್ಲಿ ನಡೆದ ನೂಕುನುಗ್ಗಲು ನನ್ನ ಜೀವನದ ಸಂಭ್ರಮವನ್ನೇ ಕಸಿಯಿತು...’

ಹೀಗೆಂದು ಸಿದ್ದಾಪುರ ಪಟ್ಟಣದ ರವೀಂದ್ರ ನಗರದ ತನ್ನ ಮನೆಯಲ್ಲಿ ಪತ್ನಿಯ ಮೃತದೇಹದ ಎದುರು ಕಣ್ಣೀರು ಸುರಿಸುತ್ತ ಸಾಫ್ಟವೇರ್ ಉದ್ಯೋಗಿ ಆಶಯ್ ಅಂಬಳ್ಳಿ ಹೇಳಿದರು. ಅವರ ಪತ್ನಿ ಅಕ್ಷತಾ ಪೈ (ಅಂಬಳ್ಳಿ) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂ.17ರ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ.

‘ಮದುವೆಯಾಗಿ ಒಂದೂವರೆ ವರ್ಷವಷ್ಟೇ ಕಳೆದಿತ್ತು. ಅಕ್ಷತಾ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದರು. ಇಬ್ಬರೂ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದೆವು. ಆರ್ಸಿಬಿ ತಂಡದ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಜಯೋತ್ಸವ ಪರೇಡ್ ಬಗ್ಗೆ ಮಾಹಿತಿ ತಿಳಿಯಿತು. ಅರ್ಧ ದಿನ ರಜೆ ಹಾಕಿ, ಇಬ್ಬರೂ ಕ್ರೀಡಾಂಗಣದ ಬಳಿ ತೆರಳಿದೆವು. ತಂಡದ ಮೇಲಿನ ಅಭಿಮಾನದಿಂದ ಆರ್ಸಿಬಿ ಜರ್ಸಿ ಧರಿಸಿದೆವು. ಗೇಟ್ ನಂ.17 ಬಳಿ ಏಕಾಏಕಿ ನೂಕುನುಗ್ಗಲು ಉಂಟಾದಾಗ, ಪತ್ನಿಯ ಕೈ ಬಿಗಿಯಾಗಿ ಹಿಡಿದಿದ್ದೆ. ಹಲವರು ನನ್ನ ಮೈಮೇಲೆ ಬಿದ್ದಿದ್ದರಿಂದ ನಿಯಂತ್ರಣ ತಪ್ಪಿ ಕೆಳಕ್ಕೆ ಕುಸಿದಿದ್ದೆ. ನೆರವಿಗೆ ಅಂಗಲಾಚಿದಾಗ ಅಲ್ಲಿದ್ದ ಕೆಲವರು ನನ್ನನ್ನು ಮೇಲಕ್ಕೆತ್ತಿದ್ದರು. ಅಕ್ಕಪಕ್ಕದಲ್ಲಿ ಎಲ್ಲಿಯೂ ಅಕ್ಷತಾ ಕಾಣಿಸದಿದ್ದಾಗ ಚಿಂತೆಗೀಡಾದೆ’ ಎಂದು ದುರ್ಘಟನೆಯನ್ನು ಆಶಯ್ ವಿವರಿಸಿದರು.

‘ಪತ್ನಿಗಾಗಿ ಸುತ್ತಮುತ್ತಲೆಲ್ಲ ಹುಡುಕಾಡಿದೆ. ಪೊಲೀಸರು ಅಲ್ಲದೇ, ಅಲ್ಲಿದ್ದ ಜನರ ಬಳಿ ವಿಚಾರಿಸಿದೆ. ಯುವಕನೊಬ್ಬ ಮೊಬೈಲ್ನಲ್ಲಿ ಸೆರೆಹಿಡಿದ್ದ ಜರ್ಸಿ ತೊಟ್ಟಿದ್ದ ಯುವತಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ತೋರಿಸಿದ. ಆಕೆ ಅಕ್ಷತಾ ಎಂಬುದು ಖಚಿತವಾಯಿತು. ಹಲವು ಆಸ್ಪತ್ರೆಗೆ ಅಲೆದಾಡಿ, ಕೊನೆಗೆ ಬೌರಿಂಗ್ ಆಸ್ಪತ್ರೆಗೆ ತೆರಳಿದಾಗ ಆಕೆಯ ಮೃತದೇಹ ನೋಡುವ ಸ್ಥಿತಿ ಎದುರಾಯಿತು’ ಎನ್ನುತ್ತ ಗದ್ಗದಿತರಾದರು.

ಅಕ್ಷತಾ ಮೃತದೇಹವನ್ನು ಗುರುವಾರ ನಸುಕಿನಲ್ಲಿ ಸಿದ್ದಾಪುರಕ್ಕೆ ತರಲಾಗಿದ್ದು, ಇಲ್ಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಕುಟುಂಬ ಸದಸ್ಯರ ರೋದನ ಮುಗಿಲುಮುಟ್ಟಿತ್ತು. ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಇತರರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.