ಶಿರಸಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2025–26ನೇ ಸಾಲಿಗೆ ಪದವಿ ಕಲಾ ವಿಭಾಗಕ್ಕೆ ನಾಲ್ಕು ಹೊಸ ಸಂಯೋಜಿತ ವಿಷಯಗಳು ಮಂಜೂರಾಗಿದ್ದು, 200 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಶಿಕ್ಷಣ ಪಡೆಯುವುದು ಎಲ್ಲರ ಹಕ್ಕು. ಹೀಗಾಗಿ ಪ್ರಾಥಮಿಕ, ಪ್ರೌಢ ಸೇರಿದಂತೆ ಕಾಲೇಜು ಹಂತದಲ್ಲಿಯೂ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುತ್ತಿದೆ. ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಕಾಲೇಜಿನಲ್ಲಿ ಕೋರ್ಸ್ಗಳನ್ನು ಒದಗಿಸಿದರೆ ಶೈಕ್ಷಣಿಕ ಪ್ರಗತಿಯ ಜತೆ ವಿದ್ಯಾರ್ಥಿಗಳ ಭವಿಷ್ಯಕ್ಕೂ ಅನುಕೂಲ’ ಎಂದರು.

‘ಎಲ್ಲ ಪ್ರಾಥಮಿಕ, ಪ್ರೌಢ ಶಾಲೆಗಳ ಮೂಲಸೌಕರ್ಯ ಒದಗಿಸುವ ಪ್ರಯತ್ನ ಮಾಡುತ್ತಿದ್ದೇನೆ. ಶಿರಸಿ 17, ಸಿದ್ದಾಪುರ 15 ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಸಕ್ತ ವರ್ಷ ಆರಂಭಿಸಲಾಗಿದೆ. ಹಂತ ಹಂತವಾಗಿ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ಪಡಿಸುವುದು ನನ್ನ ಆಶಯವಾಗಿದೆ’ ಎಂದರು.

ಸಮಿತಿಯ ಎಸ್.ಎಂ. ಕಮ್ಮನಳ್ಳಿ, ಜಗದೀಶ ಗೌಡ, ಡಿ.ಬಂಗಾರಪ್ಪ, ನಂದಕುಮಾರ ಜೋಗಳೇಕರ್, ಜನಾರ್ಧನ ಭಟ್, ಜಾಫಿ ಪೀಟರ್, ಗಣೇಶ ದಾವಣಗೆರೆ, ಜ್ಯೋತಿ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.