ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸದರ ಜನಸಂಪರ್ಕ ಕಚೇರಿ ಶೀಘ್ರ: ತುಕಾರಾಂ

ಸಾಮೂಹಿಕ ವಿವಾಹ ಕಾರ್ಯಕ್ರಮ: ಸಂಸದ ತುಕಾರಾಂ ಹೇಳಿಕೆ
Published : 8 ಸೆಪ್ಟೆಂಬರ್ 2024, 16:25 IST
Last Updated : 8 ಸೆಪ್ಟೆಂಬರ್ 2024, 16:25 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ‘ನಗರದಲ್ಲಿ ಶೀಘ್ರದಲ್ಲೇ ಜನಸಂಪರ್ಕ ಕಚೇರಿ ತೆರೆಯುತ್ತೇನೆ. ಶಿಕ್ಷಣ, ಆರೋಗ್ಯ ಮತ್ತು ಕೌಶಲ ಅಭಿವೃದ್ಧಿಗೆ ನಾನು ವಿಶೇಷ ಗಮನ ಹರಿಸಲಿದ್ದೇನೆ’ ಎಂದು ಸಂಸದ ಇ.ತುಕಾರಾಂ ಹೇಳಿದರು.

ಈದ್ ಮಿಲಾದ್ ಅಂಗವಾಗಿ ನಗರದಲ್ಲಿ ಅಂಜುಮನ್ ಕಿದ್ಮತೆ ಇಸ್ಲಾಂ ಕಮಿಟಿ ವತಿಯಿಂದ ಭಾನುವಾರ ನಡೆದ ನಾಲ್ಕನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಜುಮನ್ ಕಮಿಟಿಯ ಅಧ್ಯಕ್ಷ ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ‘ಸಂಸ್ಥೆಯು ಉಚಿತವಾಗಿ ಹೊಲಿಗೆ, ಕಂಪ್ಯೂಟರ್ ತರಬೇತಿ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಟ್ಟಡ ನಿರ್ಮಾಣಕ್ಕಾಗಿ ₹2.50 ಕೋಟಿ ಅಗತ್ಯವಿದ್ದು, ಅನುದಾನ ಕೊಡಿಸಬೇಕು’ ಎಂದು ಸಂಸದರನ್ನು ಕೇಳಿಕೊಂಡರು.

ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಕೌಶಲಾಭಿವೃದ್ಧಿ ತರಬೇತಿಯ ಮೂರು ಕೊಠಡಿಗಳನ್ನು ಉದ್ಘಾಟಿಸಲಾಯಿತು.

ಇಸ್ಲಾಂ ಧರ್ಮಗುರು ಮೆಹಬೂಬ್ ಪೀರ್ ಸಾಬ್‌, ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌., ಮುಖಂಡರಾದ ಬಿ.ಎಸ್.ಶ್ಯಾಮ್ ಸಿಂಗ್, ಸಂತೋಷ್‌ ಪಿ.ಬಿ.ಎಸ್, ಸಾಲಿ ಸಿದ್ದಯ್ಯ, ನಗರಸಭಾ ಸದಸ್ಯರಾದ ಗೌಸ್‌, ಅಬ್ದುಲ್ ಖಾದಿರ್ ಇದ್ದರು.

ನಾನು ಕೇವಲ ಸಂಸದನಾಗಿ ಅಲ್ಲದೆ ನಿಮ್ಮ ಸಹೋದರನಾಗಿ ನಿಮ್ಮ ಸೇವೆಯನ್ನು ಮಾಡುತ್ತೇನೆ.  ಅದಕ್ಕಾಗಿ ನಗರದಲ್ಲಿ ಶೀಘ್ರದಲ್ಲೇ ಜನಸಂಪರ್ಕ ಕಚೇರಿ ತೆರೆಯುತ್ತೇನೆ. ಶಿಕ್ಷಣ ಆರೋಗ್ಯ ಮತ್ತು ಕೌಶಲ ಅಭಿವೃದ್ಧಿಗೆ ನಾನು ವಿಶೇಷ ಗಮನ ಹರಿಸಲಿದ್ದೇನೆ
ಸಂಸದ ಇ.ತುಕಾರಾಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT