ಪ್ರಜಾವಾಣಿ ವಾರ್ತೆ

ಕೂಡ್ಲಿಗಿ (ವಿಜಯನಗರ ಜಿಲ್ಲೆ): ‘ಪ್ರಧಾನಿ ಮೋದಿ ಅವರು ವಿದೇಶದಿಂದ ಮರಳಿದ ಬಳಿಕ ನಾನು ದೆಹಲಿಗೆ ಹೋಗುವೆ. ರಾಜ್ಯದಲ್ಲಿ ಬಿಜೆಪಿಯನ್ನು ಇನ್ನಷ್ಟು ಬಲ ಪಡಿಸಲು ಯಾತ್ರೆ ಕೈಗೊಳ್ಳುವ ಉದ್ದೇಶವಿದ್ದು, ಇದರ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸುವೆ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

‘ಪಕ್ಷ ಸಂಘಟಿಸಲು ನಾನು ಎಲ್ಲಾ ರೀತಿಯಿಂದಲೂ ಸಮರ್ಥನಾಗಿದ್ದು, ಇದನ್ನು ವರಿಷ್ಠರಿಗೆ ಮನವರಿಕೆ ಮಾಡಲು ದೆಹಲಿಗೆ ಹೋಗುವೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಯತ್ನಾಳ ಅವರಿಗೆ ಈಗಾಗಲೇ ಎರಡು ಬಾರಿ ನೋಟಿಸ್ ನೀಡಲಾಗಿದೆ. ಈಗ ಚೆಂಡು ರಾಷ್ಟ್ರೀಯ ನಾಯಕರ ಅಂಗಳದಲ್ಲಿ ಇದೆ. ಏನು ಮಾಡಬೇಕು ಎಂಬುದು ತೀರ್ಮಾನವಾಗಲಿದೆ. ವಿಜಯೇಂದ್ರ ಅಸಮರ್ಥರು ಎಂದು ನಾನು ಹೇಳುತ್ತಿಲ್ಲ. ಎಲ್ಲವನ್ನೂ ಅಧ್ಯಕ್ಷರು ಅಥವಾ ಕೇಂದ್ರ ನಾಯಕರು ಬಂದು ಮಾಡಲು ಸಾಧ್ಯವಿಲ್ಲ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.